ಬೆಂಗಳೂರು: ಅನುಮಾನಾಸ್ಪದ ಸ್ಥಿತಿ‌ಯಲ್ಲಿ ನಿವೃತ್ತ ಬಿಇಎಂಎಲ್ ಉದ್ಯೋಗಿ ಮೃತದೇಹ ಪತ್ತೆ

Update: 2022-09-10 13:55 GMT

ಬೆಂಗಳೂರು, ಸೆ.10: ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ವಾಸವಾಗಿದ್ದ ಬಿಇಎಂಎಲ್ ನಿವೃತ್ತ ಉದ್ಯೋಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

85 ವರ್ಷದ ಮಹಾದೇವಯ್ಯ ಸಾವನ್ನಪ್ಪಿದ್ದ ವೃದ್ಧ ಎಂದು ಪೊಲೀಸರು ಗುರುತಿಸಿದ್ದಾರೆ.

ಆರ್‍ಆರ್‍ನಗರದ ವಾಸವಾಗಿದ್ದ ಮಹದೇವಯ್ಯ, ಇಎಂಎಲ್‍ನಲ್ಲಿ ಹಿರಿಯ  ವ್ಯವಸ್ಥಾಪಕರಾಗಿ ಕೆಲಸ ಮಾಡಿ ಕಳೆದ 15 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. ಪತ್ನಿ ಜಯಮ್ಮ ಖಾಸಗಿ ಬ್ಯಾಂಕ್‍ನಲ್ಲಿ ಕೆಲಸ ಮಾಡಿ ನಾಲ್ಕು ವರ್ಷಗಳ ಹಿಂದೆ ನಿವೃತ್ತಿ ಪಡೆದುಕೊಂಡು ಮೈಸೂರಿನ ಶಾರದಾನಗರದಲ್ಲಿ ಅಪಾರ್ಟ್‍ಮೆಂಟ್‍ವೊಂದರಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು.

ಈ ದಂಪತಿಗೆ ಮಕ್ಕಳಿರಲಿಲ್ಲ. ಮಹದೇವಯ್ಯ ಅವರನ್ನು ಅಕ್ಕಪಕ್ಕದ ಮನೆಯವರು ಸೆ.4ರಂದು ನೋಡಿದ್ದರು. ಸೆ.7ವರೆಗೂ ಮಹದೇವಯ್ಯ ಯಾರು ನೋಡಿರಲಿಲ್ಲ. ಅನುಮಾನಗೊಂಡು ನೆರೆಯ ನಿವಾಸಿ ಭಾರತಿ ಎಂಬುವರು ಮನೆಗೆ ಬಂದು ನೋಡಿದಾಗ ಮೃತರಾಗಿರುವ ಸಂಗತಿ ಬೆಳಕಿಗೆ ಬಂದಿದ್ದು ಪತ್ನಿ ಜಯಮ್ಮಾಗೆ ವಿಷಯ ಮುಟ್ಟಿಸಿದ್ದರು.

ಸ್ಥಳಕ್ಕೆ ಬಂದು ಪರಿಶೀಲಿಸಿದ ಜಯಮ್ಮಾ, ತನ್ನ ಗಂಡನನ್ನ ಅಪರಿಚಿತರು ಕೊಲೆ ಮಾಡಿದ್ದಾರೆ. ಅಲ್ಲದೆ ಮನೆಯ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News