×
Ad

`ಮಾಯಾಗನ್ನಡಿ’ ಕಥಾಸಂಕಲನ ಬಿಡುಗಡೆ

Update: 2022-09-10 22:57 IST

ಬೆಂಗಳೂರು, ಸೆ.10: ಡಾ.ಕರೀಗೌಡ ಬೀಚನಹಳ್ಳಿ ಅವರ ಅನುವಾದಿತ ಕಥೆಗಳ ಸಂಕಲನ ‘ಮಾಯಾಗನ್ನಡಿ’ಯನ್ನು ಮಾಜಿ ಸಚಿವ ಹಾಗೂ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಬಿಡುಗಡೆ ಮಾಡಿದರು.

ಶನಿವಾರ ವಿಜಯನಗರದ ಶ್ರೀ ಆದಿಚುಂಚನಗಿರಿ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಬುಕ್ ಹೌಸ್‍ನಲ್ಲಿ ಸಾಹಿತ್ಯ ಸಂಗಮ ಟ್ರಸ್ಟ್ ಹಾಗೂ ಕಿ.ರಂ.ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪುಸ್ತಕ ಬಿಡುಗಡೆ ಮಾಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಲೇಖಕ ಅಗ್ರಹಾರ ಕೃಷ್ಣಮೂರ್ತಿ, ಅನುವಾದ ಸಾಹಿತ್ಯ ಕೂಡ ಸೃಜನಶೀಲ ಸಾಹಿತ್ಯವೇ ಆಗಿದ್ದು, ಮೂಲ ಲೇಖಕನನ್ನೂ ಮೀರಿ ಅನುವಾದ ಸಾಹಿತ್ಯ ಬೆಳೆಯುತ್ತದೆ. ಕೆಲವು ಸಂದರ್ಭಗಳಲ್ಲಿ ಮೂಲ ಲೇಖಕರ ಕೃತಿಗಿಂತ ಅನುವಾದ ಕೃತಿಯೇ ಮಾನ್ಯತೆ ಪಡೆದಿರುವ ಉದಾಹರಣೆ ಇವೆ ಎಂದರು.

ಡಾ.ಕರೀಗೌಡ ಬೀಚನಹಳ್ಳಿ ಅವರ 71ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಹಿತ್ಯ ಸಂಗಮ ಟ್ರಸ್ಟ್‍ನ ಪದಾಧಿಕಾರಿಗಳಾದ ಕೂಡ್ಲೂರು ವೆಂಕಟಪ್ಪ, ಎಸ್.ನಾಗಭೂಷಣ, ಬಿ.ಟಿ.ಚಿಕ್ಕಪುಟ್ಟೇಗೌಡ, ಕಿ.ರಂ.ಪ್ರಕಾಶನದ ಧನಂಜಯ, ತುಕಾರಾಂ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News