×
Ad

ಬೆಳ್ಳಾರೆ | ಸಂಘ ಪರಿವಾರದ ಕಾರ್ಯಕರ್ತನಿಗೆ ಜೀವ ಬೆದರಿಕೆ: ಆರೋಪಿಯ ಬಂಧನ

Update: 2022-09-11 10:25 IST
ಸಫ್ರೀದ್

ಬೆಳ್ಳಾರೆ, ಸೆ.11: ಬೆಳ್ಳಾರೆಯ ದೇವಿ ಹೈಟ್ಸ್ ಮ್ಯಾನೇಜರ್ ಪ್ರಶಾಂತ್ ರೈ ಎಂಬವರಿಗೆ ದೂರವಾಣಿ ಕರೆ ಮಾಡಿ ಅವ್ಯಾಚವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದನೆನ್ನಲಾದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. (Arrest)

ಬೆಳ್ಳಾರೆ ನಿವಾಸಿ ಸಫ್ರೀದ್ ಬಂಧಿತ ಆರೋಪಿ. ಈತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿ ಶಫೀಕ್ ಬೆಳ್ಳಾರೆಯ ಸಹೋದರ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಿರಿಯ ಸಹೋದ್ಯೋಗಿಗಳನ್ನು ಲಾಕಪ್‍ಗೆ ತಳ್ಳಿದ ಹಿರಿಯ ಪೊಲೀಸ್ ಅಧಿಕಾರಿ; ವೀಡಿಯೊ ವೈರಲ್

ಸಂಘ ಪರಿವಾರದ ಕಾರ್ಯಕರ್ತರಾಗಿರುವ ಪ್ರಶಾಂತ್ ರೈ ಬೆಳ್ಳಾರೆಗೆ ಶನಿವಾರ ಸಂಜೆ ಆರೋಪಿ ಸಫ್ರೀದ್ ದೂರವಾಣಿ ಕರೆ ಮಾಡಿ ಅವ್ಯಾಚವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದನೆನ್ನಲಾಗಿದೆ. ಈ ಬಗ್ಗೆ ಪ್ರಶಾಂತ್ ರೈ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಬೆಳ್ಳಾರೆ ಠಾಣೆಯೆದುರು ಜಮಾಯಿಸಿದ ಸಂಘ ಪರಿವಾರದ ಕಾರ್ಯಕರ್ತರು ಆರೋಪಿ ಸಫ್ರೀದ್ ನನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದರು.

ಇದೀಗ ಆರೋಪಿ ಸಫ್ರೀದ್ ನನ್ನು ಮಂಗಳೂರಿನ ಬಜ್ಪೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News