ಬೆಂಗಳೂರು: ಚರಂಡಿಗೆ ಬಿದ್ದು ಯುವತಿ ಮೃತ್ಯು
Update: 2022-09-11 18:08 IST
ಬೆಂಗಳೂರು: ಸ್ಕೂಟರ್ ನಿಂದ ಆಯತಪ್ಪಿ ಚರಂಡಿಗೆ ಬಿದ್ದು ಯುವತಿ ಸಾವನ್ನಪ್ಪಿರುವಂತಹ ಘಟನೆ ಎಚ್‍ಬಿಆರ್ ಲೇಔಟ್‍ನ ಅಶ್ವತ್ಥ್ ನಗರದಲ್ಲಿ ನಡೆದಿದೆ.
ತಾರಾ ಬಡಾಯಿಕ್(23) ಮೃತ ಯುವತಿ ಎಂದು ಪೊಲೀಸರು ಗುರುತಿಸಿದ್ದಾರೆ.
ಯುವತಿ ತಡರಾತ್ರಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ತೆರೆದಿದ್ದ ಮ್ಯಾನ್‍ಹೋಲ್‍ಗೆ ಬಿದ್ದಿದ್ದಾರೆ. ಬಳಿಕ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆ: ರೋಗಿಯ ಶಸ್ತ್ರಚಿಕಿತ್ಸೆಗಾಗಿ ಮೂರು ಕಿ.ಮೀ ಓಡಿ ಆಸ್ಪತ್ರೆ ತಲುಪಿದ ವೈದ್ಯ!