ಸೆ.14ರವರೆಗೆ ವಿಶ್ವ ಸಾಕ್ಷರತಾ ಸಪ್ತಾಹ: ಶೀನ ಶೆಟ್ಟಿ
ಮಂಗಳೂರು: ಈ ಬಾರಿಯ ವಿಶ್ವ ಸಾಕ್ಷರತಾ ಸಪ್ತಾಹವನ್ನು ಸೆ.8ರಿಂದ 14ರವರೆಗೆ ವಿವಿಧ ಸಂಸ್ಥೆ ಗಳ ಸಹಯೋಗದಲ್ಲಿ ಆಚರಿಸಲು ನಿರ್ಧರಿಸಿ ಆರಂಭಗೊಂಡಿದೆ ಎಂದು ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕರು ದ.ಕ ಜಿಲ್ಲಾ ಸ್ವಚ್ಛತಾ ಅಭಿಯಾನದ ರಾಯಭಾರಿ ಶೀನ ಶೆಟ್ಟಿ ತಿಳಿಸಿದ್ದಾರೆ.
ಈ ಸಪ್ತಾಹ ಮುಖ್ಯವಾಗಿ ಜಿಲ್ಲೆಯ ಜನರು ತಮ್ಮನ್ನು ತಾವಾಗಿಯೇ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಳ್ಳುವ ಜಾಗೃತಿ ಮೂಡಿ ಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಒಂದು ಕಡೆ ನಡೆಯುತ್ತಿದೆ. ಆದರೆ ತ್ಯಾಜ್ಯ ವಿಲೇವಾರಿಯ ಬಗ್ಗೆ ಇನ್ನೂ ಸಾಕಷ್ಟು ಜಾಗೃತಿಯಾಗಬೇಕಾಗಿದೆ ಎಂದು ಶೀನ ಶೆಟ್ಟಿ ತಿಳಿಸಿದ್ದಾರೆ.
ಕಸದಿಂದ ರಸ:-ತರಕಾರಿ,ಸಿಪ್ಪೆ, ಹೂ,ಹಣ್ಣು ಕೊಳೆತು ಹೋಗುವ ಪದಾರ್ಥ ಸೇರಿದಂತೆ ಹಸಿ ಕಸ ವನ್ನು ವಿಂಗಡಿಸಿ ಅದನ್ನು ಜೈವಿಕ ಗೊಬ್ಬರ ವಾಗಿ ಮಾರ್ಪಡಿಸಬಹುದು.ಈ ರೀತಿಯ ಘಟಕಗಳು ಈಗಾಗಲೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ಲಾಸ್ಟಿಕ್ ಚೀಲ ಬಕೆಟ್, ಬಾಟಲ್ ಗಳು ಸೇರಿದಂತೆ ಘನ ತ್ಯಾಜ್ಯ ವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಒಂದು ಕಡೆ ಶೇಖರಿಸಿ ಅವುಗಳನ್ನು ಮಾರಾಟ ಮಾಡಿದರೆ ಕಸದಿಂದ ಆದಾಯ ವನ್ನು ಪಡೆಯಬಹುದು. ಬದಲಾಗಿ ಈ ಘನ ತ್ಯಾಜ್ಯ ವನ್ನು ಒಂದು ಕಡೆ ರಾಶಿ ಹಾಕಿ ಸುಡುವುದರಿಂದ ಅದರಿಂದ ಹೊರ ಬರುವ ಗಾಳಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೂ ಕಾರಣವಾಗಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಸ್ವಚ್ಛತೆಯ ಬಗೆಗಿನ ಜಾಗೃತಿ, ಅರಿವು ಇನ್ನಷ್ಟು ವಿಸ್ತಾರವಾಗ ಬೇಕಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಜನರ ನಡುವೆ ಮನಸ್ಸು ಕಟ್ಟುವ ಪ್ರೀತಿ ಹಂಚುವ ಕೆಲಸ ಆಗಬೇಕಾಗಿದೆ. ಇದರೊಂದಿಗೆ ಸುಸ್ಥಿರ ತೆ,ಸೌಹಾರ್ದ ತೆ,ಸಮೃದ್ಧಿ ಯ ಬದುಕು ಸಾಧ್ಯ .ಈ ನಿಟ್ಟಿನಲ್ಲಿ ಸಾಕ್ಷರತೆ ಯೊಂದಿಗೆ ಮಾದರಿ ಗ್ರಾಮದ ಸಂಕಲ್ಪ ದೊಂದಿಗೆ ಈ ಬಾರಿಯ ವಿಶ್ವ ಸಾಕ್ಷರತಾ ಸಪ್ತಾಹ ಸೆ.14 ರವರೆಗೆ ನಡೆಯಲಿದೆ. ಸೆ.12ರಂದು ಬೆ.10.30 ರಿಂದ ಮುಡಿಪುಜನ ಶಿಕ್ಷಣ ಟ್ರಸ್ಟ್, ಸಾಂತ್ವನ ಕೇಂದ್ರ, ಗ್ರಾಮ ವಿಕಾಸ ಕೇಂದ್ರ, ಸ್ಮೈಲ್ ಟ್ರಸ್ಟ್, ಜಿಲ್ಲಾ ಸಾಕ್ಷರತಾ ಸಮಿತಿ ಇವರ ಸಹಯೋಗದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ನಡೆಯಲಿದೆ.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ. ರಾಷ್ಟ್ರೀಯ ಸೇವಾ ಯೋಜನೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಸು, ಚಿತ್ತಾರ ಬಳಗ, ಜನ ಜೀವನ ಬಾಳೆಪುಣಿ, ಮಂಗಳ ಗಂಗೋತ್ರಿ ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆ ಗಳ ಪ್ರತಿನಿಧಿಗಳ ಜೊತೆ ಮಾದರಿ ಗ್ರಾಮ ,ಸಮುದಾಯ ದತ್ತ ಸಾಂತ್ವನ, ಶಾಲೆಯತ್ತ ಸಮುದಾಯ ಸಂವಾದ ,ಸಂಕಲ್ಪ,ಸಮಾಲೋಚನೆ, ಅನುಭವ ವಿನಿಮಯ ನಡೆಯಲಿದೆ ಎಂದು ಶೀನ ಶೆಟ್ಟಿ ತಿಳಿಸಿದ್ದಾರೆ