×
Ad

ಬೆಂಗಳೂರು | ಸಾಲಿಡಾರಿಟಿ ರಾಜ್ಯ ಸಮ್ಮೇಳನದ ಘೋಷಣಾ ಸಮ್ಮೇಳನ, ಪೋಸ್ಟರ್ ಬಿಡುಗಡೆ

Update: 2022-09-12 15:27 IST

ಬೆಂಗಳೂರು, ಸೆ.12: ಡಿಸೆಂಬರ್ 18ರಂದು ಬೆಂಗಳೂರಿನ ಖುದ್ದೂಸ್ ಸಾಹೇಬ್ ಮೈದಾನದಲ್ಲಿ ನಡೆಯಲಿರುವ ಸಾಲಿಡಾರಿಟಿ ಯೂತ್ ಮೂವ್'ಮೆಂಟ್ ರಾಜ್ಯ ಮಟ್ಟದ ಸಮ್ಮೇಳನದ 'ಘೋಷಣಾ ಸಮಾವೇಶ ಹಾಗೂ ಪೋಸ್ಟರ್ ಬಿಡುಗಡೆ' ಸಮಾರಂಭವು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಮಸ್ಜಿದೆ ಆಲಾದಲ್ಲಿ ನಡೆಯಿತು.

 ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾವಿಸಮ್ಮೇಳನದ ಘೋಷವಾಕ್ಯ ಮತ್ತು ಪೋಸ್ಟರನ್ನು ಬಿಡುಗಡೆಗೊಳಿಸಿದರು.
 'ಭರವಸೆ- ಮರುನಿರ್ಮಾಣ- ಘನತೆ' ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಈ ಏಕದಿನ ಸಮ್ಮೇಳನದ ಪೂರ್ವದಲ್ಲಿ ರಾಜ್ಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಸಾಲಿಡಾರಿಟಿ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಆಲಿಯಾ, ಮೌಲಾನ ಫಾರೂಕ್ ಫೌಝಾನ್ ರಶಾದಿ, ಜಮಾಅತೆ ಇಸ್ಲಾಮೀ ಹಿಂದ್ ಬೆಂಗಳೂರು ಮೆಟ್ರೋ ಸಂಚಾಲಕ ಪ್ರೊ.ಹಾರೂನ್ ಸಫ್ದರ್, ಸ್ಥಾನೀಯ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಸಾಲಿಡಾರಿಟಿ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ರಿಹಾನ್, ಸಾಲಿಡಾರಿಟಿ ಕಾರ್ಯಕಾರಿಣಿ ಸಮಿತಿ ಸದಸ್ಯ ಮಾಝ್ ಮನಿಯಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News