×
Ad

ಶಿವರಾಮ ಕಾರಂತ ಬಡಾವಣೆಯ 63 ಕಟ್ಟಡಗಳು ಸಕ್ರಮ: ಸುಪ್ರೀಂಕೋರ್ಟ್ ಆದೇಶ

Update: 2022-09-12 19:31 IST

ಬೆಂಗಳೂರು, ಸೆ.12: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಡಾ. ಶಿವರಾಮ ಕಾರಂತ ಬಡಾವಣೆಯ ವ್ಯಾಪ್ತಿಯ 63 ಕಟ್ಟಡಗಳನ್ನು ಸಕ್ರಮಗೊಳಿಸಿ ಸುಪ್ರೀಂಕೋರ್ಟ್ 2022ರ ಸೆ.8ರಂದು ಆದೇಶ ಹೊರಡಿಸಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ತಿಳಿಸಿದೆ.

ಡಾ.ಶಿವರಾಮ ಕಾರಂತ ಬಡಾವಣೆ ಕುರಿತು ಸರ್ವೋಚ್ಚ ನ್ಯಾಯಾಲಯ ರಚಿಸಿರುವ ಸಮಿತಿ ಈವರೆಗೆ 21 ವರದಿಗಳನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದು ಒಟ್ಟು 4,690 ಕಟ್ಟಡಗಳನ್ನು ಮಾನ್ಯ ಮಾಡಿರುವ ನ್ಯಾಯಪೀಠ ನಾಲ್ಕು ವಾರದೊಳಗಾಗಿ ಸಂಬಂಧಿಸಿದವರಿಗೆ ಹಕ್ಕುಪತ್ರ ವಿತರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿ ಆದೇಶಿಸಿದೆ ಎಂದು ಸಮಿತಿ ಪತ್ರಿಕಾ ಪ್ರಕಟನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News