ಪ್ರಾಧ್ಯಾಪಕ ಹುದ್ದೆಗಳ ಸಂಖ್ಯೆ ಹೆಚ್ಚಿಸದಿದ್ದರೆ ಬೃಹತ್ ಪ್ರತಿಭಟನೆ: ಸರಕಾರಕ್ಕೆ ಎಚ್ಚರಿಕೆ
Update: 2022-09-12 19:57 IST
ಬೆಂಗಳೂರು, ಸೆ.12: ಸರಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ನೇಮಕಾತಿಯಲ್ಲಿ ಹೆಚ್ಚಿನ ಹುದ್ದೆಗಳನ್ನು ಸೃಷ್ಟಿ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಉದ್ಯೋಗ ಆಕಾಂಕ್ಷಿ ಬಸವರಾಜು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ನೇಮಕಾತಿಗಾಗಿ ಮೇಲಿನ ಎಲ್ಲಾ ವಿಷಯಗಳಲ್ಲಿ ಅಧ್ಯಯನ ಮಾಡುವ ಅಭ್ಯರ್ಥಿಗಳ ಸಂಖ್ಯೆಯು ಮೊದಲಿಗಿಂತಲೂ ಹೆಚ್ಚಾಗಿದ್ದು, ಈಗ ನೇಮಕಾತಿಗಾಗಿ ಅನುಮೋದಿಸಿದ ಹುದ್ದೆಗಳ ಸಂಖ್ಯೆ ಅತ್ಯಂತ ಕಡಿಮೆ ಇದ್ದು ಹುದ್ದೆಗಾಗಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಲ್ಲಿ ನಿರಾಶೆಯನ್ನು ಉಂಟುಮಾಡಿದೆ. ಪ್ರತಿಭಾವಂತ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ನೇಮಕಾತಿಯಲ್ಲಿ ಮಂಜೂರಾಗಿರುವ 1242 ಹುದ್ದೆಗಳ ಜೊತೆಗೆ 800 ಹುದ್ದೆಗಳನ್ನು ಹೆಚ್ಚುವರಿ ಮಾಡಬೇಕು ಒತ್ತಾಯಿಸಿದರು.