ವಂಚನೆ ಆರೋಪ: ದೂರು ದಾಖಲು
Update: 2022-09-13 23:10 IST
ಮಂಗಳೂರು, ಸೆ.13: ಸಹಿಯನ್ನು ನಕಲು ಮಾಡಿ ಬೈಕ್‌ನ ಆರ್‌ಸಿಯನ್ನು ಅಕ್ರಮವಾಗಿ ಬೇರೆಯವರಿಗೆ ವರ್ಗಾಯಿಸಿ ವಂಚಿಸಿದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಮಲ್ ಕುಮಾರ್ ಎಸ್.ಭಂಡಾರಿ ಎಂಬಾತ 2.70 ಲ.ರೂ. ಮೌಲ್ಯದ ಕೆಟಿಎಂ ಬೈಕ್‌ನ್ನು ತನ್ನದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಸಾಗರ್ ಶ್ಯಾಮ್ ಎಂಬಾತನಲ್ಲಿ 30 ಸಾವಿರ ರೂ.ಗಳಿಗೆ ಅಡಮಾನವಿರಿಸಿ ಸಾಲ ಪಡೆದು ಬಳಿಕ ಮರುಪಾವತಿಸಿದ್ದರು. ಆದರೆ ಆರೋಪಿಗಾದ ಸಾಗರ್ ಶ್ಯಾಮ್, ಸುಜಿತ್, ಮನೀಶ್ ಅವರು ಸೇರಿ ಫಾರಂ ನಂ.29 ಮತ್ತು 30ರಲ್ಲಿ ನಿರ್ಮಲ್ ಕುಮಾರ್ ಎಸ್.ಭಂಡಾರಿಯ ಸಹಿ ನಕಲು ಮಾಡಿ ಬೈಕ್‌ನ ಆರ್‌ಸಿಯನ್ನು ಮನೀಶ್‌ನ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡು ವಂಚನೆ ಮಾಡಿಲ್ಲದೆ ಆರೋಪಿಗಳಿಗೆ ಶೈನಿ ಎಂಬಾತ ಸಹಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.