ಮೂಡುಬಿದಿರೆ; ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಆಯಿಶಾ ಆನಮ್ ಪ್ರಥಮ
Update: 2022-09-15 11:55 IST
ಮೂಡಬಿದಿರೆ: SHORIN RYU ಕರಾಟೆ ಅಸೋಸಿಯೇಷನ್ ವತಿಯಿಂದ ಮೂಡಬಿದಿರೆಯ ಎಂ.ಕೆ ಅನಂತ ರಾಜ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ನಲ್ಲಿ ಆಯೋಜಿಸಿದ್ದ 19ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಹಿರಾ ಪಬ್ಲಿಕ್ ಶಾಲೆಯ ಆಯಿಶಾ ಆನಮ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಸೆ. 10 (ಶನಿವಾರ) ರಂದು ಇಲ್ಲಿ ನಡೆದ 10ರಿಂದ 11 ವರ್ಷದ ಬಾಲಕಿಯರ 50 ಕೆ.ಜಿ ತೂಕಕ್ಕಿಂತ ಕೆಳಗಿನ ಆರೆಂಜ್ ಬೆಲ್ಟ್ ವಿಭಾಗದಲ್ಲಿ ಆಯಿಶಾ ಆನಮ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಮಂಗಳೂರಿನ ಕೃಷ್ಣಾಪುರದ ಹಿರಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಆಯಿಶಾ ಆನಮ್, ಇಬ್ರಾಹೀಂ (ಇಬ್ಬ) ಹಾಗೂ ಅಸ್ಮ ಕೌಸರ್ ದಂಪತಿಯ ಪುತ್ರಿ.