ವಿಧಾನಸಭೆಯಲ್ಲಿ ಬಿಬಿಎಂಪಿ ತಿದ್ದುಪಡಿ ವಿಧೇಯಕ ಮಂಡನೆ

Update: 2022-09-15 17:19 GMT

ಬೆಂಗಳೂರು, ಸೆ. 15: ‘ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಎಸ್ಸಿ-ಎಸ್ಟಿ, ಇತರೆ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಮಿತಿಗೊಳಿಸಲು ಅವಕಾಶ ಕಲ್ಪಿಸುವ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ತಿದ್ದುಪಡಿ) ವಿಧೇಯಕ-2022' ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪರವಾಗಿ ಕಾನೂನು ಸಚಿವ ಮಾಧುಸ್ವಾಮಿ ವಿಧೇಯಕವನ್ನು ಮಂಡಿಸಿದರು. ಕೋರ್ಟ್ ಬಿಬಿಎಂಪಿ ಚುನಾವಣೆ ನಡೆಸಲು ಸೂಚನೆ ನೀಡಿದ್ದು, ಶೇ.50ರ ಮೀಸಲಾತಿ ಮಿತಿಯಲ್ಲೇ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಪಾಲಿಕೆಯ ಒಟ್ಟು ಸ್ಥಾನಗಳ ಸಂಖ್ಯೆಯ ಪೈಕಿ ಎಸ್ಸಿ-ಎಸ್ಸಿ, ಒಬಿಸಿ ಹಾಗೂ ಮಹಿಳೆಯರ ಸ್ಥಾನಗಳ ಮೀಸಲಾತಿ ಶೇಕಡ 50ರಷ್ಟನ್ನು ಮೀರತಕ್ಕದ್ದಲ್ಲ. ನೇರ ಚುನಾವಣೆಯ ಮೂಲಕ ತುಂಬಬೇಕಾದ ಪಾಲಿಕೆಯ ಸೀಟುಗಳ ಒಟ್ಟು ಸಂಖ್ಯೆ ಹತ್ತಿರತ್ತಿರ ಮೂರನೇ ಒಂದರಷ್ಟನ್ನು ಅಂತಹ ಸದಸ್ಯರನ್ನು ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸತಕ್ಕದ್ದು' ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News