ಸುಂದರಿ ಪೂಜಾರ್ತಿ

Update: 2022-09-16 14:58 GMT

ಉಡುಪಿ, ಸೆ.16: ಉಡುಪಿ ನಗರಸಭೆಯ ಗುಂಡಿಬೈಲ್ ವಾರ್ಡಿನ ಸದಸ್ಯ ಪ್ರಭಾಕರ ಪೂಜಾರಿಯವರ ಮಾತೃಶ್ರೀ ಸುಂದರಿ ಪೂಜಾರ್ತಿ(85) ಅಲ್ಪಕಾಲದ ಅಸೌಖ್ಯದಿಂದ ಸೆ.೧೬ರಂದು ನಿಧನರಾದರು.

ಕೃಷಿಕರಾಗಿರುವ ಇವರು ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿ ದ್ದರು. ನಗರಸಭೆಯ ಮಾಜಿ ಸದಸ್ಯೆ ಲೀಲಾ ಆರ್.ಅಮೀನ್ ಸಹಿತ ಮೂವರು ಪುತ್ರಿಯರು, ಮೂವರು ಪುತ್ರರನ್ನು ಅಗಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದಾಜ್ಲೆ, ಶಾಸಕ ಕೆ.ರಘುಪತಿ ಭಟ್, ಸಚಿವರಾದ ಸುನೀಲ್ ವಿ. ಕುಮಾರ್, ಶ್ರೀನಿವಾಸ ಪೂಜಾರಿ,  ನಗರಸಭಾ ಅಧ್ಯಕ್ಷೆ  ಸುಮಿತ್ರಾ ಆರ್.ನಾಯಕ್, ನಗರ ಸಭೆ ಸದಸ್ಯರು, ಪೌರಯುಕ್ತ ಉದಯ ಕುಮಾರ್‌ಶೆಟ್ಟಿ ಸಂತಾಪ ವ್ಯಕ್ತಪಡಿಸಿ ದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ