ಡಾ. ಜಿ. ಇಸ್ಮಾಯೀಲ್

Update: 2022-09-16 15:49 GMT

ಮಂಗಳೂರು, ಸೆ.16: ಮೂಲತಃ ಬಂದರ್‌ನ ಪ್ರಸ್ತುತ ಪಾಂಡೇಶ್ವರದ ಸುಭಾಷ್‌ನಗರದಲ್ಲಿ ವಾಸವಾಗಿದ್ದ ಡಾ.ಜಿ. ಇಸ್ಮಾಯೀಲ್ (83) ಬುಧವಾರ ತಡರಾತ್ರಿ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಬಂದರ್‌ನಲ್ಲಿ ಕ್ಲಿನಿಕ್ ಹೊಂದಿದ್ದ ಇವರು ಸುದೀರ್ಘ ಕಾಲ ಮಕ್ಕಳ ತಜ್ಞರಾಗಿ ಜನಾನುರಾಗಿಯಾಗಿದ್ದರು. ನಗರದ ಬಂದರ್‌ನ ಝೀನತ್ ಬಕ್ಷ್ ಯತೀಂ ಖಾನಾದ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು ಮುಸ್ಲಿಂ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ