ಬೆಂಗಳೂರು | ಮಹಿಳೆಗೆ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನ: ದೂರು

Update: 2022-09-16 16:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.16: ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಸೆ.10ರ ರಾತ್ರಿ 9.30 ರಂದು ನಡೆದಿದ್ದು, ಸಾಮಾಜಿಕ ಹೋರಾಟಗಾರರ ಸಹಾಯದಿಂದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ಗುರುವಾರ ದೂರನ್ನು ದಾಖಲಿಸಿದ್ದಾರೆ. ವಿಲಿಯಮ್ ಪ್ರಕಾಶ್ ಎಂಬಾತ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. 

ಗಣೇಶ ವಿಸರ್ಜನೆ ಮಾಡಲು ಶಾಂತಲಾ ನಗರದಲ್ಲಿ ಸೆ.10ರ ರಾತ್ರಿ 8.30ಕ್ಕೆ ಮೆರವಣಿಗೆ ಹೋಗುತ್ತಿತ್ತು. ಪಕ್ಕದಲ್ಲಿದ್ದ ಚರ್ಚ್ ಲೈಟ್ ಆಫ್ ಮಾಡಲು ಹೊರಟಿದ್ದ ಮಹಿಳೆಯ ಹಿಂದೆಯೇ ಚರ್ಚ್ ಒಳಗೆ ನುಗ್ಗಿದ ಆರೋಪಿ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆ. ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರು ಸಲ್ಲಿಸಿದ್ದಾರೆ. 

ಅಶೋಕನಗರ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಘಟನಾ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿ ಪ್ರಾಥಮಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಮಹಿಳೆಯಿಂದ ಘಟನೆ ಮಾಹಿತಿ ಪಡೆದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News