ಮಂಗಳೂರು: ವಿಶ್ವಕರ್ಮ ಜಯಂತಿ ಆಚರಣೆ
ಮಂಗಳೂರು, ಸೆ.17: ದ.ಕ.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರದ ರಥಬೀದಿಯ ಕಾಳಿಕಾಂಬ ವಿನಾಯಕ ದೇವಸ್ಥಾನದ ಸಂಯುಕ್ತಾಶ್ರಯದಲ್ಲಿ ಶನಿವಾರ ವಿಶ್ವಕರ್ಮ ಜಯಂತಿ ಕಾರ್ಯಕ್ರಮವು ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಶಿಲ್ಪದಲ್ಲಿ ಕಲೆ ಅರಳಿಸುವ ವಿಶ್ವಕರ್ಮ ಸಮುದಾಯದವರ ಕೆಲಸಗಳು ಭಾರತವನ್ನು ವಿಶ್ವದೆಲ್ಲಡೆ ಆಕರ್ಷಿಸುತ್ತದೆ. ಪುರಾಣದಲ್ಲಿ ಉಲ್ಲೇಖವಾಗಿರುವ ಹಲವು ನಗರಗಳ ನಿರ್ಮಾಣ ಸಹಿತ ದೇಶದ ಅಪೂರ್ವ ಶಿಲ್ಪಕಲೆಗಳಿಗೆ ನೀಡಿದ ವಿಶ್ವಕರ್ಮ ಸಮುದಾಯದ ಕೊಡುಗೆಗಳು ಅಪಾರ ಎಂದರು.
ವೇದಿಕೆಯಲ್ಲಿ ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ತಹಶೀಲ್ದಾರ್ ಪುರಂದರ, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೇಶವಾಚಾರ್ಯ, ಸುಂದರಾಚಾರ್ಯ, ಲೋಕೇಶ್ ಆಚಾರ್ಯ ಉಪಸ್ಥಿತರಿದ್ದರು.
ಬೇಲೂರಿನ ವೇದ ಹಾಗೂ ಸಂಸ್ಕೃತ ಶಿಕ್ಷಕ ವಿಶ್ವನಾಥ ಶರ್ಮ ‘ವಿಶ್ವಕರ್ಮ ಜಯಂತಿ’ಯ ಸಂದೇಶ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು.