ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ; ಆಳ್ವಾಸ್‍ಗೆ ಪ್ರಶಸ್ತಿ

Update: 2022-09-17 16:24 GMT

ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜು ಮೂಡುಬಿದಿರೆ ಇವರ ಆಶ್ರಯದಲ್ಲಿ ಪ್ಯಾಲೇಸ್ ಮೈದಾನದಲ್ಲಿ ಸೆ.16 ರಂದು ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಖೋ-ಖೋ ಪಂದ್ಯಾಟದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜು, ಮುಲ್ಕಿ ತಾಲೂಕನ್ನು ಪ್ರತಿನಿಧಿಸಿದ ಎಸ್.ಟಿ.ಬಿ.ಟಿ ಪದವಿ ಪೂರ್ವ ಕಾಲೇಜು ಕಟೀಲು ತಂಡವನ್ನು ಸೋಲಿಸಿ ಫೈನಲ್‍ಗೆ ಪ್ರವೇಶಿಸಿತು ಮಂಗಳೂರು ತಾಲೂಕನ್ನು ಪ್ರತಿನಿಧಿಸಿದ ಕಪಿತಾನಿಯೋ ಪದವಿ ಪೂರ್ವ ಕಾಲೇಜು, ಕಡಬ ತಂಡವನ್ನು ಪ್ರತಿನಿಧಿಸಿದ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜನ್ನು ಸೋಲಿಸಿ ಫೈನಲ್‍ಗೆ ಪ್ರವೇಶಿಸಿತು.

ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಕಪಿತಾನಿಯೋ ತಂಡವನ್ನು 8 ಅಂಕಗಳೊಂದಿಗೆ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ಮೂಡುಬಿದ್ರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜು, ಮುಲ್ಕಿ ತಾಲೂಕನ್ನು ಪ್ರತಿನಿಧಿಸಿದ ನಿರಂಜನಾ ಸ್ವಾಮಿ ಪದವಿ ಪೂರ್ವ ಕಾಲೇಜು ತಂಡವನ್ನು ಸೋಲಿಸಿ ಫೈನಲ್‍ಗೆ ಪ್ರವೇಶಿಸಿತು, ಕಡಬ ತಾಲೂಕನ್ನು ಪ್ರತಿನಿಧಿಸಿದ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಪುತ್ತೂರು ತಾಲೂಕನ್ನು ಪ್ರತಿನಿಧಿಸಿದ ವಿವೇಕಾನಂದ ಪದವಿ ಪೂರ್ವ ಕಾಲೇಜನ್ನು ಸೋಲಿಸಿ ಫೈನಲ್‍ಗೆ ಪ್ರವೇಶಿಸಿತು. ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ರಾಮಕುಂಜೇಶ್ವರ ತಂಡವನ್ನು 7 ಅಂಕಗಳೊಂದಿಗೆ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮಹಮ್ಮದ್ ಸದಕತ್ ವೀಕ್ಷಕರಾಗಿ ಆಗಮಿಸಿದ ಪುನೀತ್ ದೈಹಿಕ ಶಿಕ್ಷಣ ಉಪನ್ಯಾಸಕರು ಬೆತಾನಿ ಪದವಿ ಪೂರ್ವ ಕಾಲೇಜು ನೂಜಿಪಾಲ್ತಿಲ ಮತ್ತು ಪ್ರದೀಪ್ ಆಳ್ವಾಸ್ ತರಬೇತುದಾರರು, ದೈಹಿಕ ಶಿಕ್ಷಣ ಉಪನ್ಯಾಸಕರಾದ ನವೀನ್ ರೈ ಮತ್ತು ಹರ್ಷಿತಾ ಶೆಟ್ಟಿ ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News