ಕಾರ್ಕಳ: ರಸ್ತೆ ದುರಸ್ಥಿಗೆ ಒತ್ತಾಯಿಸಿ ಪ್ರತಿಭಟನೆ

Update: 2022-09-17 16:37 GMT

ಕಾರ್ಕಳ: ಆಡಳಿತ ಪಕ್ಷ  ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದೆ ಇದು  ಪ್ರಜಾಪ್ರಭುತ್ವ ಮೇಲೆ ನಡೆಸಿರುವ ದಾಳಿ ಎಂದು ಪುರಸಭಾ ಸದಸ್ಯ ಶುಭದರಾವ್  ಹೇಳಿದರು.

ಭವಾನಿ ಮಿಲ್‌ನಿಂದ ಮೂರು ಮಾರ್ಗದ ತನಕ ವರೆಗಿನ ಮಂಗಳೂರು ರಸ್ತೆ ದುರಸ್ಥಿಗೆ ಆಗ್ರಹಿಸಿ ಸಾರ್ವಜನಿಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

2007 ರಲ್ಲಿ ಇದೇ ರಸ್ತೆ ಹಾಳಾಗಿದ್ದ ಸಮಯದಲ್ಲಿ ಚದುರಂಗ ಆಟವಾಡಿ ಹದಿನೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಇಂಟರ್ ಲಾಕ್ ವ್ಯವಸ್ಥೆ ಕಲ್ಪಿಸಲಾಗಿತ್ತು ಆದರೆ ಈಗ ಮತ್ತು ಅದೆ ರಸ್ತೆ  ಸಂಪೂರ್ಣ ಹದಗೆಟ್ಟಿದೆ. ಕಾಂಕ್ರಿಟೀಕರಣ ಡಾಮರೀಕರಣ ಕಾರ್ಯ ನಡೆದರೆ ನಾವೇ ಖುದ್ಧಾಗಿ ಇದೇ ರೀತಿಯಲ್ಲಿ ಮೆರವಣಿಗೆ ನಡೆಸಿ ಸಾದಕರಿಗೆ ಹಾರ ಹಾಕಿ ಸನ್ಮಾನಿಸುತ್ತೇವೆ. ಇಲ್ಲದೇ ಹೋದಲ್ಲಿ ಈಗ ಕೋಣ ಮುಂದೆ ಕತ್ತೆಯ ಮೆರವಣಿಗೆ ಮಾಡುವುದಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಶುಭದರಾವ್ ಎಚ್ಚರಿಕೆ ನೀಡಿದರು.

ಚಿನ್ನದ ರಸ್ತೆಗೆ  ಬೆಳ್ಳಿಯ ಲೇಪನ

ಮಂಗಳೂರು ರಸ್ತೆಯು  ಪುರಸಭಾ ಅಧ್ಯಕ್ಷರ ವಾರ್ಡ್ ಅಗಿದ್ದು. ಈ ರಸ್ತೆಗೆ ಡಾಮರೀಕರಣಕ್ಕೆ ಟೆಂಡರ್ ಕೂಡ ಆಗಿಲ್ಲ , ಆದರೆ ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಹೂಡಲಾಗಿದೆ. ಕಳೆದ ರಾತ್ರಿ ಪ್ರತಿಭಟನೆಗೆ ಹೆದರಿ ಚಿನ್ನದ ರಸ್ತೆ ಗೆ ಜಲ್ಲಿ ಹುಡಿ ಹಾಕಿ ಬೆಳ್ಳಿಯ ಲೇಪನ‌ ಮಾಡಲಾಗಿದೆ. ಪುರಸಭಾ ಅಧ್ಯಕ್ಷರು ರಸ್ತೆಯು ತಾಂತ್ರಿಕ  ಪ್ರಕ್ರಿಯೆಯಲ್ಲಿದೆ ಎನ್ನುತ್ತಿದ್ದಾರೆ ಕ್ಷೇತ್ರಾಧ್ಯಕ್ಷರು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ  ಈ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ ಎಂದು ಶುಭದರಾವ್ ಹೇಳಿದರು.

ಪುರಸಭಾ ಕೌನ್ಸಿಲರ್‌ಗಳಾದ ಶುಭದರಾವ್, ವಿನ್ನಿಬೋಲ್ಡ್ ಮೆಂಡೋನ್ಸಾ, ಸೋಮನಾಥ, ಪುರಸಭಾ ಮಾಜಿ ಅಧ್ಯಕ್ಷರಾದ ಸೀತಾರಾಮ, ಪ್ರತಿಮಾ ರಾಣೆ, ಉದ್ಯಮಿಗಳಾದ ರಾಜೇಂದ್ರ, ಯುವ ಕಾಂಗ್ರೆಸ್ ಮುಖಂಡ ಯೋಗೀಶ್ ಇನ್ನಾ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಕಳ ಬಸ್‌ನಿಲ್ದಾಣದಿಂದ ಹೊರಟ ಪ್ರತಿಭಟನೆಗೆ ಮೂರು ಮಾರ್ಗ ತಲುಪುತ್ತಿದ್ದಂತೆ ಚಿನ್ನದ ರಸ್ತೆಯ ಉದ್ಘಾಟನೆಯ ಪ್ರಹಸನವನ್ನು ರಿಬ್ಬನ್ ಕತ್ತರಿಸುವ ಮೂಲಕ ನಡೆಸಲಾಯಿತು. ಕಂಬಳ ಕೋಣಗಳನ್ನು ಹಿಡಿದು ಕಾಮಧೇನು ಹೋಟೆಲ್ ವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News