ಕಳವು ಪ್ರಕರಣ: 15 ಲಕ್ಷ ರೂ.ಮೌಲ್ಯದ ದ್ವಿಚಕ್ರ ವಾಹನ ಜಪ್ತಿ
Update: 2022-09-17 23:20 IST
ಬೆಂಗಳೂರು, ಸೆ.17: ‘ದ್ವಿಚಕ್ರ ವಾಹನ ಕಳವು ಆರೋಪ ಪ್ರಕರಣ ಸಂಬಂಧ ಕೋರಮಂಗಲ ಠಾಣಾ ಪೊಲೀಸರು 15 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ನಾಲ್ವರಿಂದ 9 ಸ್ಕೂಟರ್, 4 ಬೈಕ್ ಸೇರಿ 29 ದ್ವಿಚಕ್ರ ವಾಹನಗಳು, ಆಟೊವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.
ಆರೋಪಿಗಳಲ್ಲಿ ನಗರದ ಓರ್ವ ಸೇರಿದ್ದು, ಆತನೊಂದಿಗೆ ಸೇರಿದ ತಮಿಳುನಾಡಿನ ಮೂವರು ಬಂಧಿತರು ಗುಂಪು ಕಟ್ಟಿಕೊಂಡು ಕೋರಮಂಗಲ, ಮಡಿವಾಳ, ಹುಳಿಮಾವು, ಬೊಮ್ಮನಹಳ್ಳಿ, ಆನೇಕಲ್ ಸೇರಿದಂತೆ ರಾಜ್ಯದ ವಿವಿಧೆಡೆ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದರು.
ಕಳವು ಮಾಡಿದ ವಾಹನಗಳನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಅಲ್ಲಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಮಾರಾಟ ಮಾಡಿ ಬಂದ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.