×
Ad

ಸೆ.20-21ರಂದು ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ವ್ಯತ್ಯಯ

Update: 2022-09-18 15:36 IST

ಉಡುಪಿ, ಸೆ.18: ಹಿರಿಯಡ್ಕದ _ವಿದ್ಯುತ್ ಉಪಕೇಂದ್ರದಲ್ಲಿ ಬಸ್‌ಬಾರ್‌ಗಳ ಮತ್ತು ಶಕ್ತಿ ಪರಿವರ್ತಕಗಳ ವಾರ್ಷಿಕ ನಿರ್ವಹಣೆಯ ಕಾಮಗಾರಿಯನ್ನು ಮೆಸ್ಕಾಂ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ಆದುದರಿಂದ ಉಡುಪಿ ನಗರಸಭಾ ವ್ಯಾಪ್ತಿಯ ನೀರು ಸರಬರಾಜು ಮಾಡುವ ಬಜೆ ರೇಚಕ ಸ್ಥಾವರದ 11 ಕೆವಿ. ವಿದ್ಯುತ್ ತಂತಿ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

ಆದುದರಿಂದ ಸೆ.20ರಂದು ಮಂಗಳವಾರ ಮತ್ತು ಸೆ.21ರಂದು ಬುಧವಾರ ಉಡುಪಿ ನಗರಸಭಾ ವ್ಯಾಪ್ತಿಯ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ವಾಗಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News