ತ್ರೋಬಾಲ್ ಪಂದ್ಯಾಟ; ರೋಸಾ ಮಿಸ್ತಿಕಾ ಕಾಲೇಜು ತಂಡ ರಾಜ್ಯಮಟ್ಟಕ್ಕೆ ಆಯ್ಕೆ
Update: 2022-09-18 19:48 IST
ಮಂಗಳೂರು: ನಗರದ ಹೊರವಲಯದ ಕಿನ್ನಿಕಂಬಳದ ಪದವಿ ಪೂರ್ವ ಶಿಕ್ಷಣ ಇಲಾಖಾ ವತಿಯಿಂದ ಸುಳ್ಯದ ಅರಂತೋಡು ನೆಹರೂ ಸ್ಮಾರಕ ಪಪೂ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ರೋಸಾ ಮಿಸ್ತಿಕಾ ಪ.ಪೂ ಕಾಲೇಜಿನ ಹುಡುಗರ ವಿಭಾಗವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿಗಳಾದ ಮುಹಮ್ಮದ್ ಅನಾಸ್, ಉತ್ತಮ ಹಿಡಿತಗಾರ ಶಿಹಾಲ್ ಪಂದ್ಯಶ್ರೇಷ್ಠ ಮುಡಿಗೇರಿಸಿಕೊಂಡರು. ದೈ.ಶಿ.ಶಿಕ್ಷಕ ಅಮ್ಸಿಲ್ ತರಬೇತಿ ನೀಡಿದ್ದರು.