ಶಿಕ್ಷಕಿಯರಿಗೆ ರೋಟರಿ ರಾಷ್ಟ್ರ ನಿರ್ಮಾತ ಪ್ರಶಸ್ತಿ ಪ್ರದಾನ
ಮಂಗಳೂರು, ಸೆ.18: ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯು ಮೂಲಭೂತ ಸಾಕ್ಷರತೆ ಮತ್ತು ಶಿಕ್ಷಣ ಯೋಜನೆಯ ಅಭಿಯಾನದ ಅಂಗವಾಗಿ ಶುಕ್ರವಾರ ನಗರದ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ಆಚರಿಸಿದ ಕಾರ್ಯಕ್ರಮದಲ್ಲಿ ಮೂವರು ಶಿಕ್ಷಕಿಯರಿಗೆ ರೋಟರಿ ರಾಷ್ಟ್ರ ನಿರ್ಮಾತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಪೆರ್ಮನ್ನೂರಿನ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿ ಜ್ಯೋತಿ, ಮುಲ್ಲಕಾಡಿನ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಹರಿಣಾಕ್ಷಿ, ತರಿಕರಿಯ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರಮಾದೇವಿ ಪ್ರಶಸ್ತಿ ಸ್ವೀಕರಿಸಿದರು.
ವೇದಿಕೆಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಸಹಾಯಕ ಗರ್ವನರ್ ರೋ. ರಾಜ್‌ಗೋಪಾಲ್ ರೈ, ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರೋ. ಪ್ರೇಮನಾಥ್ ಕುಡ್ವ, ಮಾಜಿ ಅಧ್ಯಕ್ಷ ರೋ ರಾಮಶೇಷ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ರೋ.ಸಾಬಾಬಾ ರಾವ್ ಸ್ವಾಗತಿಸಿದರು. ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ರೋ.ಡಾ. ದೇವದಾಸ್ ರೈ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ಕಾರ್ಯದರ್ಶಿ ರೋ. ಪ್ರದೀಪ್ ಕುಲಾಲ್ ಮಾಸಿಕ ವರದಿ ವಾಚಿಸಿದರು. ರೋ.ಎಸ್.ಎಸ್. ನಾಕ್ ವಂದಿಸಿದರು.