ಭರವಸೆ ಈಡೇರಿಸದಿದ್ದರೆ ಮುಖ್ಯಮಂತ್ರಿ ಮುಖಕ್ಕೆ ಮಸಿ ಬಳಿಯಬೇಕಾದಿತು: ಪ್ರಮೋದ್ ಮುತಾಲಿಕ್

Update: 2022-09-19 17:56 GMT

ಸುಳ್ಯ, ಸೆ. 19: ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಪ್ರವೀಣ್ ನೆಟ್ಟಾರು ಅವರ ಮನೆಗೆ ಸೋಮವಾರ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಪ್ರಮೋದ್ ಮುತಾಲಿಕ್, ಪ್ರವೀಣ್ ನೆಟ್ಟಾರು ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಅವರ ಕುಟುಂಬಕ್ಕೆ ಸರಕಾರ ನೀಡಿದ ಭರವಸೆಯನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು. ಒಂದು ವೇಳೆ ಮಾತು ತಪ್ಪಿದಲ್ಲಿ ಮುಖ್ಯಮಂತ್ರಿ ಮನೆ ಮುಂದೆ ಸಾವಿರಾರು ಜನ ಸೇರಿಸಿ ಧರಣಿ ಕೂತು, ಸಿಎಂ ಮುಖಕ್ಕೆ ಮಸಿ ಬಳಿಯಬೇಕಾದಿತು ಎಂದು ಹೇಳಿದರು.

ಸಿಎಂ ಕಚೇರಿಯಲ್ಲಿ ಪ್ರವೀಣ್ ಪತ್ನಿಗೆ ಕೆಲಸ ಕೊಡುವುದಾಗಿ ತಿಳಿಸಿದ್ದಾರೆ. ಅದನ್ನು ಕೂಡಲೇ ನೆರವೇರಿಸಬೇಕು. ಹಿಂದೆಯೂ ಇದೇ ರೀತಿಯ ಆಶ್ವಾಸನೆ ನೀಡಿ ಈಡೇರಿಸಿಲ್ಲ. ಅದು ಪರೇಶ್ ಮೇಸ್ತಾ, ಶರತ್ ಮಡಿವಾಳ ಅವರಿಗೆ ನೀಡಿದ ಘೋಷಣೆ ಈಡೇರಲಿಲ್ಲ. ಕೃತ್ಯ ಎಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅವರಿಗೆ ಎಂದಿಗೂ ಜಾಮೀನು ದೊರೆಯದಂತೆ ನೋಡಿಕೊಳ್ಳಬೇಕು. ಪ್ರವೀನ್ ಹತ್ಯೆ ನಡೆದು ಒಂದು ವಾರದಲ್ಲೇ ನಾನು ಭೇಟಿ ಮಾಡಲು ಬಂದಿದೆ. ಆದರೆ ಹೆಜಮಾಡಿನಲ್ಲೇ ಸರಕಾರ ನನಗೆ ನಿಷೇಧ ಹೇರಿತ್ತು. ಸರಕಾರ ಈ ಕ್ರಮ ಖಂಡನೀಯ ಎಂದರು.

ಶ್ರೀರಾಮಸೇನೆ ರಾಜ್ಯ ಪ್ರ. ಕಾರ್ಯದರ್ಶಿ ಆನಂದ ಶೆಟ್ಟಿ, ಮಂಗಳೂರು ವಿಭಾಗ ಅಧ್ಯಕ್ಷ ಮೋಹನ್ ಭಟ್, ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಜಿಲ್ಲಾಧ್ಯಕ್ಷ  ಪ್ರದೀಪ್ ಮೂಡುಶೆಡ್ಡೆ, ಅಖಿಲ ಕರ್ನಾಟಕ ರಾಜಕೇಸರಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ಸಂಚಾಲಕ ಚಂದ್ರಹಾಸ ಪೂಜಾರಿ, ಧನ್ಯಕುಮಾರ್ ಪುತ್ತೂರು, ದಿನೇಶ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News