×
Ad

ಕಣ್ಣೂರು: ಯೂತ್ ಜೋಡೊ ಬೂತ್ ಜೋಡೊ ಕಾರ್ಯಕ್ರಮಕ್ಕೆ ಚಾಲನೆ

Update: 2022-09-19 21:40 IST

ಮಂಗಳೂರು, ಸೆ.19: ಯುವ ಕಾಂಗ್ರೆಸ್ ದ.ಕ. ಜಿಲ್ಲಾ ಸಮಿತಿ ಮತ್ತು ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಕಣ್ಣೂರು ವಾರ್ಡಿನಲ್ಲಿ ಯೂತ್ ಜೋಡೊ ಬೂತ್ ಜೋಡೊ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಈ ಸಂದರ್ಭ ಭಾರತ್ ಜೋಡೊ ಯಾತ್ರೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಆಳ್ವ, ಕಣ್ಣೂರು ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಇ.ಕೆ, ಮುಖಂಡರಾದ ಸಮದ್ ಅಡ್ಯಾರ್, ಟಿ.ಕೆ. ಸುಧೀರ್, ಇಮ್ರಾನ್, ಮೋನಾಕ, ಹಮೀದ್ ಕಡೆಕಾರ್, ಉಮರಬ್ಬ, ಭಾಸ್ಕರ್, ಅಲ್ತಾಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಯಾರ್, ಬ್ಲಾಕ್ ಉಪಾಧ್ಯಕ್ಷರಾದ ಪ್ರಭೀತ್ ಕುಮಾರ್, ಜವಾಝ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಆಸಿಫ್ ಬಜಾಲ್, ಹಬೀಬ್ ಕಣ್ಣೂರು, ಮುಹಮದ್ ಹ್ಯಾರಿಸ್, ಆರಿಫ್ ಬಜಾಲ್, ದಿಲ್‌ಶಾದ್, ಅಲಿಸ್ಟರ್ ಮತ್ತಿತ್ತರರು ಉಪಸ್ಥಿತರಿದ್ದರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News