ಗಾಂಧಿವಾದಿ ಇಸ್ಮಾಯಿಲ್ ಕಣಂತೂರು ಮನೆ ಈಗ ಗ್ರಂಥಾಲಯ

Update: 2022-09-20 15:41 GMT

ಕೊಣಾಜೆ: ಬಾಳೆಪುಣಿ ಗ್ರಾಮದ ನವಗ್ರಾಮ ಜನ ವಸತಿ ಪ್ರದೇಶದ ಗಾಂಧಿವಾದಿ, ಪುಸ್ತಕ ಪ್ರೇಮಿ ಗುಜುರಿ ವ್ಯಾಪಾರಿ ಇಸ್ಮಾಯಿಲ್ ಕಣಂತೂರು ಅವರ ಮನೆ ಗ್ರಂಥಾಲಯವಾಗಿ ರೂಪುಗೊಂಡಿದೆ.

ಮಾದರಿ ಗ್ರಾಮ ಅಭಿಯಾನದಡಿ ವಿಶ್ವ ಸಾಕ್ಷರತಾ ಸಪ್ತಾಹದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಶಿಕ್ಷಣ ಪರಿಷತ್ತನ ಶೈಕ್ಷಣಿಕ  ಸಮಾಲೋಚಕ ಪ್ರೊ. ಚೇತನ್ ಚಿತ್ತಾಲ್ಕರ್, ಮಹಾತ್ಮ ಗಾಂಧಿ ನರೇಗಾ ಮಾಜಿ ಒಂಬುಡ್ಸ್‍ಮೆನ್ ಶೀನ ಶೆಟ್ಟಿ, ಮಂಗಳೂರು ವಿ.ವಿ., ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಯಶಸ್ವಿನಿ ಭಟಂಗಾಯ, ಜನ ಶಿಕ್ಷಣ ಟ್ರಸ್ಟ್‍ನ ಕೃಷ್ಣ ಮೂಲ್ಯ ಹಾಗೂ ರಾಜ್ಯದ ವಿವಿಧ ಕಾಲೇಜುಗಳ ಪ್ರಾಧ್ಯಾಪಕರ ಉಪಸ್ಥಿತಿಯಲ್ಲಿ ಗ್ರಂಥಾಲಯಕ್ಕೆ ಚಾಲನೆ ನೀಡಲಾಯಿತ್ತು.

ಇಸ್ಮಾಯಿಲ್ ಅವರು ತನ್ನ ಗುಜುರಿ ಅಂಗಡಿಯಲ್ಲಿ ಖರೀದಿಸಿ ಆಯ್ದ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ 2 ಸಾವಿರಕ್ಕೂ ಹೆಚ್ಚು ಉಪಯುಕ್ತ ಪುಸ್ತಕಗಳು ಗ್ರಹ ಗ್ರಂಥಾಲಯಕ್ಕೆ ಸೇರ್ಪಡೆಯಾಗಿದೆ.  ಕಲೆ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ಚರಿತ್ರೆ, ಆರೋಗ್ಯಕ್ಕೆ ಸಂಬಂಧಿಸಿದ ಅಮೂಲ್ಯ ಪುಸ್ತಕಗಳು ನವಗ್ರಾಮ ಕುಕ್ಕದ ಕಟ್ಟೆ ಜನ ವಸತಿ ಪ್ರದೇಶದ ಆಸಕ್ತ ಓದುಗರು, ಶಾಲಾ, ಕಾಲೇಜು ವಿದ್ಯಾರ್ಥಿನಿಗಳು ಈ ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳುವಂತೆ ಇಸ್ಮಾಯಿಲ್ ಕೋರಿದ್ದಾರೆ.

ಇಸ್ಮಾಯಿಲ್ ಅವರ ಮನೆ ಸಂಪೂರ್ಣ ಸಾಕ್ಷರ, ಸ್ವಚ್ಛ, ಸೋಲಾರ್, ಹಸಿರು, ಜಲ ಸಾಕ್ಷರ ಮಾದರಿ ಮನೆಯೊಂದು ಗುರುತಿಸಲ್ಪಟ್ಟಿದ್ದು ಊರ ಪರ ಊರಿನ ಆಸಕ್ತರು ಇವರ ಮನೆಗೆ ಭೇಟಿ ನೀಡಿ ಮಾಹಿತಿ ಪ್ರೇರಣೆ ಪಡೆದುಕೊಳ್ಳುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News