ಫಾದರ್ ಮುಲ್ಲರ್‌ನಲ್ಲಿ ಪ್ರೊ. ಜೆ..ಎನ್ ಶೆಟ್ಟಿ ಸ್ಮಾರಕ ಕಾರ್ಯಕ್ರಮ

Update: 2022-09-20 15:47 GMT

ಮಂಗಳೂರು, ಸೆ.20: ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಚರ್ಮರೋಗ ವಿಭಾಗವು, ಜೆ ಎನ್ ಶೆಟ್ಟಿ ಸ್ಮಾರಕ ಟ್ರಸ್ಟ್ ಹಾಗು ಕರಾವಳಿ ಚರ್ಮರೋಗ ತಜ್ಣರ ಒಕ್ಕೂಟದ ಸಹಭಾಗಿತ್ವದಲ್ಲಿ ಪ್ರೊ.ಜೆ.ಎನ್. ಶೆಟ್ಟಿ ಸ್ಮಾರಕ ಕಾರ್ಯಕ್ರಮವನ್ನು ಇತ್ತೀಚೆಗೆ ಫಾದರ್ ಮುಲ್ಲರ್ ಆಸ್ಪತ್ರೆಯ ಸಭಾಭವನದಲ್ಲಿ ಹಮ್ಮಿಕೊಂಡಿತ್ತು.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು. ಅತಿಥಿಯಾಗಿ ಡಾ ಸಂದೀಪ್ ಧಾರ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ವಂ.ಫಾ ಅಜಿತ್ ಬಿ.ಮಿನೆಜಸ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಅಂಟೋನಿ ಸಿಲ್ವನ್ ಡಿಸೋಜ, ಜೆಎನ್ ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ ಸುಕುಮಾರ್ ಡಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News