ಅರಸು ಪ್ರಶಸ್ತಿಯ ಶ್ರೇಯಸ್ಸು ನನ್ನನ್ನ ಬೆಳೆಸಿದ ಸಮಾಜಕ್ಕೆ ಸಲ್ಲಬೇಕು: ಡಾ. ಕುಲಾಲ್

Update: 2022-09-20 16:39 GMT

ಸುರತ್ಕಲ್, ಸೆ. 20: ಹಿಂದುಳಿದ ವರ್ಗದವರು ಶೈಕ್ಷಣಿಕ ವಾಗಿ ಮತ್ತೂ ಸಾಮಾಜಿಕವಾಗಿ ಅಭಿವೃದ್ಧಿಯಾದಾಗ  ಮಾತ್ರ ಉತ್ತಮ ಸಮಾಜ ಕಟ್ಟಲು, ಸಾಮಾಜಿಕ ರಾಜಕೀಯ ನ್ಯಾಯ ಲಭಿಸಲು ಸಾಧ್ಯ ಎಂದು ಡಾ. ಅಣ್ಣಯ್ಯ ಕುಲಾಲ್ ಹೇಳಿದ್ದಾರೆ‌.

ಅವರು ಸುರತ್ಕಲ್ ಕುಲಾಲ ಸಂಘದಲ್ಲಿ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಆಯೋಜಿಸಿದ್ದ, ರಾಜ್ಯ, ಜಿಲ್ಲಾ ವಿಭಾಗ, ಪದಗ್ರಹಣ ಮತ್ತು ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನನಗೆ ರಾಜ್ಯ ಸರಕಾರ ನೀಡಿದ ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿಯನ್ನು ಹಿಂದುಳಿದ ವರ್ಗದ ಎಲ್ಲಾ ಸಮುದಾಯದವರಿಗೆ ಹಾಗೂ ನನಗೆ 16 ವರ್ಷ ಓದಲು ಅವಕಾಶ ಮಾಡಿಕೊಟ್ಟ ಸರಕಾರಿ ದೇವರಾಜ ಅರಸು ಹಾಸ್ಟೆಲ್ ಮತ್ತು ಓದು ನಿಂತೇ ಹೋದಾಗ ಜಾತಿ ನೋಡದೆ ಕೈಹಿಡಿದು ಮೊನ್ನಡೆಸಿದ ಸರ್ವ ಜಾತಿಯ ಸಂಘಟನೆಗಳಿಗೆ ಸಮರ್ಪಿಸುತ್ತೇನೆ ಎಂದು ಅಣ್ಣಯ್ಯ ಕುಲಾಲ್ ನುಡಿದರು.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಮಾತನಾಡಿ, ಅಣ್ಣಯ್ಯ ಕುಲಾಲರಿಗೆ ದೊರೆತ ಈ ಬಾರಿಯ ದೇವರಾಜ ರಾಜ್ಯ ಪ್ರಶಸ್ತಿ ಸಮಸ್ತ ಕರವಾಳಿಯ ಜನತೆಗೆ ದೊರೆತ ಪ್ರಶಸ್ತಿ ಎಂದು ಭಾವಿಸುತ್ತೇನೆ. ಕುಲಾಲ ಕುಂಬಾರಯುವ ವೇದಿಕೆಯ ಬಹು ದಿನದ ಬೇಡಿಕೆಯಾದ ಸರ್ವಜ್ಞ ವೃತ್ತ ವನ್ನು ನಿರ್ಮಿಸಲು ಸರಿಯಾದ ಸ್ಥಳ ಗೊತ್ತು ಪಡಿಸಿ, ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪ್ರಯತ್ನಿಸಲಾಗುವುದು ಎಂದರು.

ಇದಕ್ಕೆ ಮುನ್ನ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ರಮಾನಂದ ಭಟ್ ಅವರಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಮಹಾಬಲ ಕಡಂಬೊಡಿ ನೇತೃತ್ವದಲ್ಲಿ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಮಾಡಿ, ತೆರೆದ ವಾಹನದಲ್ಲಿ ಡಾ. ಅಣ್ಣಯ್ಯ ಕುಲಾಲ್ ಅವರನ್ನು ಭವ್ಯ ಮೆರವಣಿಗೆ ಮೂಲಕ ತಡಂಬೈಲ್ ಕುಲಾಲ ಸಂಘಕ್ಕೆ ಬರ ಮಾಡಿ ಕೊಡಲಾಯಿತು.

ಇದೆ ವೇದಿಕೆಯಲ್ಲಿ ಸಂಘಟನೆ ಸೇವೆಗಾಗಿ ಅಶೋಕ್ ಕೂಳೂರು, ಕ್ರೀಡಾ ಕ್ಷೇತ್ರದಲ್ಲಿ ನಾರಾಯಣ್ ಮೂಲ್ಯ ಎಚ್ ಪಿಸಿಎಲ್, ಕಲಾ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಎಚ್. ಕೆ. ನಯನಾಡ್, ಸಾಮಾಜಿಕ ಸೇವೆಗಾಗಿ ಸತೀಶ್ ಕಡಿಯಾಳಿ ಇವರನ್ನು ಸನ್ಮಾನಿಸಿ  ಅಭಿನಂದಿಸಲಾಯಿತು.

ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆಯ ರಾಜ್ಯ ಅಧ್ಯಕ್ಷರಾಗಿ ಆಯ್ಕೆ ಆದ ಗಂಗಾಧರ್ ಬಂಜನ್, ಕಾರ್ಯ ದರ್ಶಿ ಜಯೇಶ್ ಗೋವಿಂದ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಆದ ಸುಕುಮಾರ್ ಬಂಟ್ವಾಳ್
 ಕಾರ್ಯದರ್ಶಿಯಾದ ಲೋಕೇಶ್  ಗುರುವಾಯನಕೆರೆ, ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಆದ ದಿವಾಕರ್ ಬಂಗೇರ ಕಾರ್ಯ ದರ್ಶಿ ದಿನೇಶ್ ಕುಲಾಲ್ ಸಂತಕಟ್ಟೆ, ಕಾಸರಗೋಡು ಜಿಲ್ಲೆ ಅಧ್ಯಕ್ಷರಾಗಿ ನವೀನ್ ಮಜಲ್ 
ವಲಯ ಅಧ್ಯಕ್ಷರಾಗಿ ಆಯ್ಕೆ ಆದ ಸತೀಶ್ ನಡೂರು, ಕಾರ್ಯ ದರ್ಶಿಯಾದ ಗಣೇಶ್ ಎಸ್. ಕುಲಾಲ್ ಕುಳಾಯಿ ಅವರ ಪದಗ್ರಹಣ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪಿಡಬ್ಲ್ಯೂ ಡಿ ನಿವೃತ್ತ ಇಂಜಿನಿಯರ್ ಶ್ರೀನಿವಾಸ್ ಆರ್. ವಹಿಸಿದ್ದರು.
ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸುರೇಶ್ ಕುಲಾಲ್, ಪೆರ್ಡೂರ್ ಕುಂಬಾರ ಗುಡಿ ಕೈಗರಿಕಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್  ಪಕ್ಕಾಲು, ಮಹಾನಗರ ಪಾಲಿಕೆ ಸದಸ್ಯರಾದ ಲೋಕೇಶ್ ಬೊಳ್ಳಜೆ, ಶ್ವೇತಾ ಪೂಜಾರಿ, ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ದಿನಕರ್ ಅಂಚನ್, ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆಯ ರಾಜ್ಯ ಕಾರ್ಯದರ್ಶಿ ಹರೀಶ್ ಕರಿಂಜಾ ಪ್ರಸ್ತಾವನೆ ಗೈದು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ  ಸುಧಾಕರ್ ಸಾಲಿಯಾನ್, ಗಣೇಶ್ ಎಂಆರ್ಪಿಎಲ್, ದಯಾನಂದ್ ಪಡ್ರೆ, ನರೇಂದ್ರ ಜೋಕ್ಕಟೆ, ಸುಂದರ್ ಬಂಗೇರ ಎಂಆರ್ ಪಿಎಲ್, ಮಂಗಳೂರು ಉತ್ತರ ವಿಧಾನ ಸಭಾ ಅಧ್ಯಕ್ಷ ದೀಕ್ಷಿತ್ ಕುಲಾಲ್ ಕೋಡಿಕೆರೆ, ಅವಿಭಜತ ದಕ್ಷಿಣ ಕನ್ನಡ ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದ್ರೆ ಪುತ್ತೂರು, ಸುಳ್ಯ, ಬಂಟ್ವಾಳ ಕಾಸರಗೋಡಿನ ಹಿರಿಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅನ್ವಿತಾ ಪ್ರಾರ್ಥಿಸಿದರು. ಎಚ್. ಕೆ. ನಯನಾಡ್ ಮತ್ತು ಜಯಂತ್ ಸಂಕೋಳಿಗೆ ನಿರೂಪಿಸಿದರು. ನೂತನ ರಾಜ್ಯ ಕಾರ್ಯದರ್ಶಿ ಜಯೇಶ್ ಗೋವಿಂದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News