ಪ್ರತಿಷ್ಠಿತ ಕಂಪನಿಗಳ ಒತ್ತುವರಿ ಕಟ್ಟಡಗಳನ್ನು ಹೊರತುಪಡಿಸಿ, ಸ್ಲ್ಯಾಬ್ ಮಾತ್ರ ತೆರವುಗೊಳಿಸುತ್ತಿರುವ ಬಿಬಿಎಂಪಿ

Update: 2022-09-21 18:19 GMT

ಬೆಂಗಳೂರು, ಸೆ.21: ನಗರದ ಮಹದೇವಪುರ ವಲಯ ವ್ಯಾಪ್ತಿಯ ಕಸವನಗಳ್ಳಿಯ ವಲ್ಲಿಯಮ್ಮ ಲೇಔಟ್‍ನಲ್ಲಿ ಶೆಡ್‍ಗಳನ್ನು, ಗ್ರೀನ್ ಹುಡ್ ರೆಸಿಡೆನ್ಸಿ ಆವರಣದಲ್ಲಿ ನಿರ್ಮಿಸಿದ ಸ್ಲ್ಯಾಬ್, ಮಾರತಹಳ್ಳಿ ಪೊಲೀಸ್ ಠಾಣೆಯ ಹಿಂಭಾಗ ಜಲಮಂಡಳಿಯ ಎಸ್‍ಟಿಪಿ ಬಳಿ ರಾಜಕಾಲುವೆ ಮೇಲೆ ನಿರ್ಮಿಸಿದ್ದ ಆರ್‍ಸಿಸಿ ಸೇತುವೆಯನ್ನು ಬುಧವಾರ ತೆರವು ಮಾಡಲಾಯಿತು. ಹಾಗೆಯೇ ಕಸವನಹಳ್ಳಿ, ಹೂಡಿ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯವನ್ನು ಮಾಡುತ್ತಿದ್ದು, ಒತ್ತುವರಿ ಮಾಡಿರುವ ಜಾಗವನ್ನು ಮಾರ್ಕಿಂಗ್ ಮಾಡಿದ ಬಳಿಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. 

ನಗರದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಐಟಿ ಕಂಪನಿಗಳ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಬಹಿರಂಗವಾಗಿದೆ. ಆದರೆ ಬಿಬಿಎಂಪಿ ಬಡ ಮತ್ತು ಮಧ್ಯಮ ವರ್ಗದವರು ರಾಜಕಾಲುವೆಗಳನ್ನು ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡಗಳನ್ನು ಮಾತ್ರ ನೆಲಸಮಗೊಳಿಸಿದ್ದು, ವಿಪ್ರೋ, ನಲಪಾಡ್ ಅಕಾಡೆಮಿ ಪ್ರತಿಷ್ಠಿತ ಕಟ್ಟಡಗಳಿಗೆ ವಿನಾಯಿತಿ ಒತ್ತುವರಿ ತೆರವುಗೊಳಿಸುವುದರಿಂದ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News