ಬೆಂಗಳೂರಿನಲ್ಲಿ PAYCM ಪೋಸ್ಟರ್ ಪ್ರಕರಣ: ಹಲವು ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

Update: 2022-09-22 04:11 GMT
ಬೆಂಗಳೂರಿನಲ್ಲಿ ಬುಧವಾರ ಕಂಡುಬಂದ ಪೋಸ್ಟರ್ ಗಳು

ಬೆಂಗಳೂರು, ಸೆ.22: ರಾಜ್ಯ ಬಿಜೆಪಿ ಸರಕಾರ ಪ್ರತಿಯೊಂದು ಕೆಲಸಕ್ಕೆ ಶೇ.40 ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿ ಬೆಂಗಳೂರಿನ ಎಲ್ಲೆಡೆ PAYCM ಪೋಸ್ಟರ್ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರ ಮುಂಜಾನೆ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರನ್ನು PAYCM ಪೋಸ್ಟರ್ ಹಚ್ಚಿದ ಬಗ್ಗೆ ವಿಚಾರಣೆ ಮಾಡಲು ವಶಕ್ಕೆ ಪಡೆದು ಹೈಗ್ರೌಂಡ್ಸ್ ಪೋಲಿಸ್ ಠಾಣೆಗೆ  ಕರೆದೊಯ್ಯಲಾಗಿದೆ.

ಈ ಕುರಿತು 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಬಿ.ಆರ್.ನಾಯ್ಡು, ಈ ಪ್ರಕರಣದಲ್ಲಿ ನಾನು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ. ಆದರೆ, ನನ್ನನ್ನು ಉದ್ದೇಶಪೂರ್ವಕವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿದರು.

ಅದೇರೀತಿ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಗಗನ್ ಯಾದವ್ ಅವರನ್ನು ಕೆಆರ್ ಪುರದ ಅವರ ನಿವಾಸ ದೇವಸಂದ್ರದಿಂದ ಸದಾಶಿವ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನೂ, PAYCM ಪೋಸ್ಟರ್ ಪ್ರಕರಣ ಸಿಸಿಬಿಗೆ ವರ್ಗಾವಣೆ‌ಯಾಗಿದೆ ಎನ್ನಲಾಗಿದೆ.

ನಗರ ಪೊಲೀಸ್ ಆಯುಕ್ತರಿಂದ ಆದೇಶವಾಗಿದ್ದು, ನಗರದ ವಿವಿಧ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪೋಸ್ಟರ್ ಅಂಟಿಸಿದ್ದು ನಾಲ್ಕು ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.

ಇದನ್ನೂ ಓದಿ: SDPI, PFI ಕಚೇರಿ ಸೇರಿದಂತೆ ನಾಯಕರ ಮನೆ ಮೇಲೆ ಎನ್ಐಎ ದಾಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News