×
Ad

ಜಯಂಟ್ಸ್ ಸಪ್ತಾಹದಲ್ಲಿ ರಂಗೋಲಿ, ಮೆಹಂದಿ ಸ್ಪರ್ಧೆ

Update: 2022-09-22 19:43 IST

ಉಡುಪಿ, ಸೆ.22: ಜಯಂಟ್ಸ್ ಬ್ರಹ್ಮಾವರದ ವತಿಯಿಂದ ಜಯಂಟ್ಸ್ ಸಪ್ತಾಹದ ಅಂಗವಾಗಿ ಸಾಂಪ್ರದಾಯಿಕ ಚುಕ್ಕಿ ರಂಗೋಲಿ ರಚನಾ ಸ್ಪರ್ಧೆ, ಸಾಂಪ್ರದಾಯಿಕ ಮೆಹಂದಿ ಸ್ಪರ್ಧೆ ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಭಾಂಗಣದಲ್ಲಿ ನಡೆಯಲಿದೆ.

ಸ್ಪರ್ಧೆಯು ಅಕ್ಟೋಬರ್ 1ರಂದು ಬೆಳಗ್ಗೆ 10 ರಿಂದ ಅಪರಾಹ್ನ 12 ರವರೆಗೆ ನಡೆಯಲಿದೆ. ನಿಯಮ:  ಭಾಗವಹಿಸುವ ಸ್ಪರ್ಧಿಗಳು ರಂಗೋಲಿ ಪುಡಿಯಿಂದಲೇ ಕೈಯಿಂದ ಚುಕ್ಕಿ ಇಟ್ಟು ಬಿಡಿಸಿದ ರಂಗೋಲಿ ಮಾತ್ರ ಅರ್ಹ. ವಿಸ್ತೀರ್ಣ 2x2 ಉದ್ದ/ಅಗಲ, ಎಲ್ಲಾ ಪರಿಕರಗಳನ್ನು ತಾವೇ ತರಬೇಕು, 15 ನ್ಚ್ಛಿಷ ಮುಂಚಿತ ಉಪಸ್ಥಿತರಿರಬೇಕು.  14 ವರ್ಷಕ್ಕೆ ಮೇಲ್ಪಟ್ಟವರಿಗೆ, ಮೆಹಂದಿ ಒಂದು ಕೈಗೆ (ಸ್ವತಃ ಅಥವಾ ಇನ್ನೊಬ್ಬರ ಕೈಗೆ) ಮಾತ್ರ ಹಚ್ಚಬಹುದು.

ಆಸಕ್ತರು ಸೆ.30ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 8296551578, 9901657585 ಸಂಪರ್ಕಿಸಬಹುದು ಎಂದು ಜಯಂಟ್ಸ್ ಬ್ರಹ್ಮಾವರ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News