'ಮಾ' ಅಧ್ಯಕ್ಷರಾಗಿ ಪ್ರೊ.ಶ್ರೀಪತಿ ಕಲ್ಲೂರಾಯ ಆಯ್ಕೆ

Update: 2022-09-23 10:16 GMT

ಕೊಣಾಜೆ, ಸೆ.23: ಮಂಗಳೂರು ವಿಶ್ವವಿದ್ಯಾನಿಲಯದ  ಮಂಗಳ ಆಲ್ಯೂಮಿನಿ ಆಸೋಶಿಯೇಶನ್ ('ಮಾ') ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು.‌

 ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳ‌ ಆಯ್ಕೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ  ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಡಾ.ಎ.ಎಂ.ಖಾನ್, ಸದಾನಂದ ಶೆಟ್ಟಿ  ಡಾ.ದೇವಿಪ್ರಭಾ, ಕಾರ್ಯದರ್ಶಿಯಾಗಿ  ಡಾ.ಚಂದ್ರು ಹೆಗ್ಡೆ

ಸಂಘಟನಾ ಕಾರ್ಯದರ್ಶಿಯಾಗಿ ವೇಣುಶರ್ಮ, ಜೊತೆ ಕಾರ್ಯದರ್ಶಿಯಾಗಿ ಇಕ್ಬಾಲ್ ಯು.ಟಿ., ಡಾ.ಸಬಿತಾ, ಖಜಾಂಚಿಯಾಗಿ  ಡಾ.ವಿಶ್ವನಾಥ, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಡಾ.ಪಕ್ಕಳ ಟಿ.ಪಿ.ಎಂ., ಡಾ.ಮಂಜುನಾಥ ಪಟ್ಟಾಭಿ, ಡಾ.ಬಾಲಕೃಷ್ಣ ಕಲ್ಲೂರಾಯ, ಡಾ.ಕೃಷ್ಣಶರ್ಮ, ಡಾ.ಭೋಜ ಪೂಜಾರಿ, ಡಾ. ಶೇಖರ್ ನಾಯಕ್, ಡಾ.ಸುಭಾಶಿನಿ ಶ್ರೀವತ್ಸ, ಶ್ರೀಧರ ಮಣಿಯಾಣಿ, ಡಾ.ಉಮ್ಮಪ್ಪ ಪೂಜಾರಿ, ಡಾ.ಪ್ರಭಾಕರ ನೀರುಮಾರ್ಗ, ಮಧುಸೂಧನ್ ಭಟ್,  ಡಾ.ಶ್ಯಾಮ್ ಪ್ರಸಾದ್,  ಡಾ.ಸತೀಶ್ ಕೊಣಾಜೆ, ಡಾ.ಚಂದ್ರಶೇಖರ್ ಶೆಟ್ಟಿ, ಸುಬ್ರಹ್ಮಣ್ಯ ಟಿ. ನೇಮಕಗೊಂಡರು.

ಕಳೆದ 14 ವರ್ಷದವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ದಿನೇಶ್ ಕುಮಾರ್  ಆಳ್ವ ಸಂಘದ ಗೌರವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.

ಸಭೆಯ ಆರಂಭದಲ್ಲಿ ಡಾ.ಚಂದ್ರು ಹೆಗ್ಡೆ ವಾರ್ಷಿಕ ವರದಿ ವಾಚಿಸಿದರು. ಮುಂದಿನ ವರ್ಷದ ಕಾರ್ಯಚಟುಚಟಿಕೆಗಳ ಯೋಜನೆಯನ್ನು ಮಂಡಿಸಿ ಅಂಗೀಕರಿಸಲಾಯಿತು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ ಮಾತನಾಡಿ,  ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 'ಹಳೆವಿದ್ಯಾರ್ಥಿ ಭವನ' ನಿರ್ಮಾಣ ಮಾಡುವ ಯೋಜನೆಗಳು ರೂಪುಗೊಂಡಿದ್ದು, ಇದರ ಪೂರ್ವ ತಯಾರಿ ಚಟುವಟಿಕೆಗಳನ್ನು ಆರಂಭಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News