ಬೆಂಗಳೂರು; ನಗರದಲ್ಲಿ ಮುಂದುವರಿದ ಒತ್ತುವರಿ ತೆರವು ಕಾರ್ಯಾಚರಣೆ

Update: 2022-09-23 15:49 GMT

ಬೆಂಗಳೂರು, ಸೆ.23: ಮಹದೇವಪುರದಲ್ಲಿ ಜಲಾವೃತಕ್ಕೆ ಕಾರಣವಾಗಿದ್ದ ರಾಜಕಾಲುವೆ ಒತ್ತುವರಿ ತರವುಗೊಳಿಸಲು ಮೀನಾಮೇಷ ಎಣಿಸುತ್ತಿರುವ ಬಿಬಿಎಂಪಿ, ಅಸಹಾಯಕರ ಒತ್ತುವರಿ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯಾಚರಣೆಯನ್ನು ಮುಂದುವರೆಸಿದೆ.

ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಐಟಿ ಕಂಪನಿಗಳಿಗಳ ಹಾಗೂ ರಾಜಕಾರಣಿ ನಲಪಾಡ್ ಒಡೆತನದ ಕಟ್ಟಡವನ್ನು ತೆರವುಗೊಳಿಸುವಾಗ, ಪ್ರಬಲರ ಲಾಬಿಗೆ ಮಣಿದ ಬಿಬಿಎಂಪಿ ಮಧ್ಯಮ ವರ್ಗದವರ 4 ಅಂತಸ್ತಿನ ಕಟ್ಟಡವನ್ನು ಧ್ವಂಸಗೊಳಿಸಿದೆ.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಪಾಪಯ್ಯ ರೆಡ್ಡಿ ಲೇಔಟ್‍ನಲ್ಲಿ 4 ಅಂತಸ್ತಿನ ಕಟ್ಟಡ, ಸರ್ಜಾಪುರ ರಸ್ತೆಯ ಗ್ರೀನ್‍ವುಡ್ ರೆಸಿಡೆನ್ಸಿ ಬಳಿ ಸ್ಲ್ಯಾಬ್ ತೆರವು ಹಾಗೂ ದೊಡ್ಡನೆಕ್ಕುಂದಿಯ ಫನ್ರ್ಸ್ ಸಿಟಿ ಆವರಣದಲ್ಲಿ ಸರ್ವೇ ಕಾರ್ಯವನ್ನು ಶುಕ್ರವಾರದಂದು ನಡೆಸಲಾಯಿತು.
ಪಾಪಯ್ಯ ರೆಡ್ಡಿ ಲೇಔಟ್‍ನಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ 4 ಅಂತಸ್ತಿನ ಕಟ್ಟಡವನ್ನು ಸಿಬ್ಬಂದಿಯ ಮೂಲಕ ಅವಶ್ಯಕ ಸಲಕರಣೆಗಳನ್ನು ಬಳಸಿಕೊಂಡು ಸಂಪೂರ್ಣ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯ ಇಂದು(ಸೆ.23) ಮುಂದುವರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News