ಸಜಿಪ: ಹಳೆ ವಿದ್ಯಾರ್ಥಿ ಸಂಘಟನೆಯಿಂದ ‘ಬಸ್ಮಲ’ ಕಾರ್ಯಕ್ರಮ

Update: 2022-09-23 16:44 GMT

ಸಜಿಪ, ಸೆ.23: ಶೈಖುನಾ ಹಂಝಕ್ಕೋಯ ಬಾಖವಿ ಉಸ್ತಾದ್ ಅವರ ಹಳೆ ವಿದ್ಯಾರ್ಥಿ ಸಂಘಟನೆಯ ವತಿಯಿಂದ ‘ಬಸ್ಮಲ-22’ ಕಾರ್ಯಕ್ರಮವು ಇತ್ತೀಚೆಗೆ ಸಜಿಪ ಸಮೀಪದ ಚಟ್ಟೆಕಲ್ ಜಲಾಲಿಯ್ಯ ಮಸ್ಜಿದ್ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಝೈನುಲ್ ಉಲಮಾ ಮಾಣಿ ಉಸ್ತಾದ್ ‘ಜಗತ್ತಿನಲ್ಲಿ ಪ್ರವಾದಿಯ ನಡೆ ನುಡಿಗಳು ಎಲ್ಲರಿಗೂ ಮಾದರಿಯಾಗಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಓದಲ್ಪಡುವ ಪುಸ್ತಕವು ಪ್ರವಾದಿಯ ಬಗ್ಗೆಯಾಗಿದೆ. ಹಾಗಾಗಿ ಅವರ ಜೀವನ ಶೈಲಿಯನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಬೇಕಿದೆ ಎಂದರು.

ಹಂಝಕ್ಕೋಯ ಬಾಖವಿ ಉಸ್ತಾಸ್ ಮಾತನಾಡಿ ಆತ್ಮೀಯತೆಗೆ ಹೆಚ್ಚು ಒತ್ತಯ ಕೊಡುವುದರ ಮೂಲಕ ಸಮಾಜದಲ್ಲಿ ಶಾಂತಿ ನೆಲ ನಿಲ್ಲಲಿದೆ. ಆದ್ದರಿಂದ ಆತ್ಮೀಯತೆಗೆ ಪ್ರಾಮುಖ್ಯತೆ ನೀಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಮಾಣಿ ಉಸ್ತಾದ್ ಹಾಗೂ ಹಂಝಕ್ಕೊಯ ಬಾಖವಿ ಅವರನ್ನು ಸನ್ಮಾನಿಸಲಾಯಿತು.

ಬಸ್ಮಲ ಅಧ್ಯಕ್ಷ ಸೈಯದ್ ಜಲಾಲುದ್ದೀನ್ ತಂಳ್ ಮಲ್‌ಹರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಸೈಯದ್ ಉಮರ್ ಜಮಲುಲೈಲಿ ತಂಳ್, ಸೈಯದ್ ಮುಶ್ಕಾಕುರ‌್ರಹ್ಮಾನ್ ತಂಳ್, ಸೈಯದ್ ಸೈಫುಲ್ಲಾಹಿ ತಂಳ್, ಪ್ರಧಾನ ಕಾರ್ಯದರ್ಶಿ ಝೈನುಲ್ ಆಬಿದ್ ಸಖಾಫಿ ಮಾಗುಂಡಿ, ಕೋಶಾಧಿಕಾರಿ ಶರೀಫ್ ಸಅದಿ ಚಾಲಿಯಂ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಲಿ ಅಝ್ಹರಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News