ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಆರ್‌ಸಿಬಿ ಪರ ಜೈಕಾರ ಕೂಗಿದ ಅಭಿಮಾನಿಗಳಿಗೆ ಕೊಹ್ಲಿ ಹೇಳಿದ್ದೇನು?

Update: 2022-09-24 17:24 GMT
Photo: Twitter/@yash_kashikar 

ನಾಗ್ಪುರ: ಗುರುವಾರ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಪಂದ್ಯದ ವೇಳೆ ಅಭಿಮಾನಿಗಳು 'ಆರ್‌ಸಿಬಿ'(RCB) ಎಂದು ಜೈಕಾರ ಕೂಗಿದ್ದು, ಈ ವೇಳೆ ವಿರಾಟ್ ಕೊಹ್ಲಿ(Virat Kohli) ತಮ್ಮ ಜೆರ್ಸಿಯಲ್ಲಿರುವ ಲೋಗೋ ತೋರಿಸುತ್ತಾ ಭಾರತವನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳುವ ವಿಡಿಯೋ ವೈರಲ್ ಆಗಿದೆ.

ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದ ವೇಳೆ ಗುಂಪೊಂದು 'ಆರ್‌ಸಿಬಿ' ಎಂದು ಜೈಕಾರವನ್ನು ಕೂಗಿದ್ದಾರೆ. ಮಳೆಯಿಂದಾಗಿ ವಿಳಂಬವಾಗಿದ್ದ ಪಂದ್ಯದ ಆರಂಭಕ್ಕಾಗಿ ಡ್ರೆಸ್ಸಿಂಗ್ ಕೊಠಡಿಯಲ್ಲಿ ಕಾಯುತ್ತಿದ್ದ ಕೊಹ್ಲಿ ಅಭಿಮಾನಿಗಳ ಜೈಕಾರಕ್ಕೆ ಪ್ರತಿಕ್ರಿಯಿಸಿ, ತಮ್ಮ ಜೆರ್ಸಿಯಲ್ಲಿರುವ ಲೋಗೋ ತೋರಿಸುತ್ತಾ ಅವರು ಭಾರತವನ್ನು ಪ್ರತಿನಿಧಿಸುತ್ತಿರುವುದಾಗಿ ಅಭಿಮಾನಿಗಳಿಗೆ ಹೇಳಿದ್ದಾರೆ.

ಈ ವೇಳೆ ಕೊಹ್ಲಿ ಪಕ್ಕದಲ್ಲಿಯೇ ನಿಂತಿದ್ದ ಹರ್ಷಲ್ ಪಟೇಲ್ ಕೂಡ ಲೋಗೋ ದೇಶವನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಸನ್ನೆ ಮಾಡಿದ್ದಾರೆ. ನಂತರ ಅಭಿಮಾನಿಗಳು 'ಆರ್‌ಸಿಬಿ' ಜೈಕಾರ ನಿಲ್ಲಿಸಿದ್ದು, ಕೊಹ್ಲಿ ಮತ್ತು ಭಾರತದ ಪರ ಜೈಕಾರ ಕೂಗಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸಿದ್ದು, ರವಿವಾರ ಸರಣಿಯ ಅಂತಿಮ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ವಿದಾಯದ ಪಂದ್ಯದಲ್ಲಿ ಕೌರ್ ಜೊತೆ ಟಾಸ್ ಹಾರಿಸಲು ಬಂದ ಜೂಲನ್ ಗೋಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News