‘ಕುಡ್ಲದ ಪಿಲಿ ಪರ್ಬ 2022’: ಚಪ್ಪರ ಮುಹೂರ್ತ

Update: 2022-09-26 12:02 GMT

ಮಂಗಳೂರು, ಸೆ. 26: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ‘ಕುಡ್ಲದ ಪಿಲಿ ಪರ್ಬ 2022’ ಕಾರ್ಯಕ್ರಮಕ್ಕೆ ಇಂದು ನಗರದ ನೆಹರೂ ಮೈದಾನದಲ್ಲಿ ಚಪ್ಪರ ಮುಹೂರ್ತ ಕಾರ್ಯ ನಡೆಯಿತು.

ಅ. 2ರಂದು ತುಳುನಾಡಿನ ಸಾಂಪ್ರದಾಯಿಕ ಕಲೆ ಹುಲಿವೇಷ ಸ್ಪರ್ಧಾಕೂಟ ‘ಕುಡ್ಲದ ಪಿಲಿ ಪರ್ಬ 2022’ ನಡೆಯಲಿದೆ.

ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿ ಮಾತನಾಡಿ, ಅ. 2ರಂದು ಬೆಳಗ್ಗೆ 9 ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದ್ದು, ಮಧ್ಯರಾತ್ರಿಯವರೆಗೆ ನಡೆಯಲಿದೆ. ಸಾಂಪ್ರದಾಯಿಕ ವ್ಯವಸ್ಥೆಯಡಿ ಸ್ಪರ್ಧೆ ನಡೆಯಲಿದ್ದು, ಅದಕ್ಕೆ ತಕ್ಕಂತೆ ಅಂಕಗಳನ್ನು ನಿಗದಿಪಡಿಸಲಾಗಿದೆ. ಒಂದು ತಂಡಕ್ಕೆ 20 ನಿಮಿಷ ಕಾಲಾವಕಾಶ ನೀಡಲಾಗಿದೆ. ವಿಜೇತರ ತಂಡಕ್ಕೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.

ಸುಮಾರು 5,000 ಮಂದಿಗೆ ಕುಳಿತುಕೊಳ್ಳಲು ಅವಕಾಶ ಇರುವ ಗ್ಯಾಲರಿ ನಿರ್ಮಾಣ ಮಾಡಲಾಗುತ್ತದೆ. ವಿನೂತನ ಕಲ್ಪನೆಯ ಎತ್ತರದ ಸ್ಟೇಜ್ ನಿರ್ಮಾಣ ಮಾಡಲಾಗುತ್ತಿದ್ದು, ಸುಮಾರು 15,000 ಮಂದಿ ಭಾಗವಹಿ ಸಲು ನಿರೀಕ್ಷೆ ಇದೆ. ಮೈದಾನಿನಲ್ಲಿ ತಿಂಡಿ-ತಿನಿಸು ಸೇರಿದಂತೆ ವಿವಿಧ ಮಾರಾಟ ಮಳಿಗೆಗಳು ಇರಲಿದೆ ಎಂದರು.

ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಗಿರಿಧರ ಶೆಟ್ಟಿ, ಉದಯ್ ಬಳ್ಳಾಲ್‌ಬಾಗ್, ಚೇತನ್ ಕಾಮತ್, ಕದ್ರಿ ನವನೀತ್ ಶೆಟ್ಟಿ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಕಿಶೋರ್ ಕೊಟ್ಟಾರಿ, ರೂಪಾಶ್ರೀ ಪೂಜಾರಿ, ಮನೋಹರ ಶೆಟ್ಟಿ, ಶಕೀಲ ಕಾವ, ಲೀಲಾವತಿ, ವೀಣಾಮಂಗಳ, ಚಂದ್ರಾವತಿ, ಭಾನುಮತಿ, ರೇವತಿ, ಜಯಲಕ್ಷ್ಮೀ, ಭರತ್ ಸೂಟರ್‌ಪೇಟೆ, ಸಂದೀಪ್ ಗರೋಡಿ, ಶೈಲೇಶ್ ಶೆಟ್ಟಿ, ವಿಜಯ್‌ಕುಮಾರ್ ಶೆಟ್ಟಿ, ಭಾಸ್ಕರಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಗಣೇಶ್ ಕುಲಾಲ್, ಜಗದೀಶ್ ಶೆಟ್ಟಿ, ರೂಪಶ್ರೀ ಪೂಜಾರಿ, ಶೋಭಾ ಪೂಜಾರಿ, ಲಲಿತ್ ಮೆಂಡನ್, ಪ್ರವೀಣ್ ಕೊಡಿಯಾಲ್‌ಬೈಲ್, ಅಶ್ವಿತ್ ಕೊಟ್ಟಾರಿ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News