ಗಾರ್ಡಿಯನ್ ಏಂಜಲ್ ಚರ್ಚ್‌ನಲ್ಲಿ ಬಂಧುತ್ವದ ಸಂಭ್ರಮ
Update: 2022-09-26 19:58 IST
ಮಂಗಳೂರು, ಸೆ.26: ನಗರದ ಗಾರ್ಡಿಯನ್ ಏಂಜಲ್ ಚರ್ಚ್‌ನ ವಾರ್ಷಿಕ ಹಬ್ಬದ ತಯಾರಿಯ ಅಂಗವಾಗಿ ರವಿವಾರ ಚರ್ಚ್‌ನಲ್ಲಿ ಬಂಧುತ್ವದ ಸಂಭ್ರಮವನ್ನು ಆಚರಿಸಲಾಯಿತು.
ಇಗರ್ಜಿಯ ಪ್ರಧಾನ ಧರ್ಮಗುರು ವಂ.ಸ್ವಾಮಿ ಆ್ಯಂಡ್ರೂ ಡಿಸೋಜ ಸಂಜೆ ಬಲಿಪೂಜೆಯನ್ನು ಬಜಾಲ್ ಪತ್ರಾತ್ಮರಿಗೆ ಸಮರ್ಪಿಸಿದರು. ಬಳಿಕ ಮಾತನಾಡಿದ ಅವರು ವಾರ್ಷಿಕ ಹಬ್ಬದ ಆಚರಣೆಯನ್ನು ಅರ್ಥಪೂರ್ಣ ಗೊಳಿಸಲು ಎಲ್ಲರೂ ತಮ್ಮ ನೆರೆಯವನಿಗೆ ಆಪದ್ಭಾಂದವನಾಗಲು ಕರೆ ನೀಡಿದರು.
ಬಲಿಪೂಜೆಯ ಬಳಿಕ ಪತ್ರ ಪ್ರಸಾದವನ್ನು ಮೆರವಣಿಗೆಯಲ್ಲಿ ಕಪಿತಾನಿಯೋ ಶಾಲೆಯ ವಠಾರಕ್ಕೆ ತರಲಾಯಿತು. ಕಪಿತಾನಿಯೋ ಶಾಲೆಯನ್ನು ಪ್ರವೇಶಿಸುವಾಗ ಬಿಳಿ ಉಡುಗೆ ಧರಿಸಿದ ಪುಟಾಣಿಗಳು ಹೂಮಳೆಗರೆದು ಪತ್ರ ಪ್ರಸಾದಕ್ಕೆ ಗೌರವ ಸಲ್ಲಿಸಿದರು. ಧಾರ್ಮಿಕ ಆಚರಣೆಯು ಪತ್ರ ಪ್ರಸಾದದ ಆರಾಧನೆಯ ಮೂಲಕ ಕೊನೆಗೊಂಡಿತು.