ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ BBMP

Update: 2022-09-26 15:13 GMT

ಬೆಂಗಳೂರು, ಸೆ.26: ಹದಿನೈದು ದಿನಗಳಿಂದ ನಗರದಲ್ಲಿ ಒತ್ತುವರಿ ತೆರವು ಕಾರ್ಯಚರಣೆಯನ್ನು ನಡೆಸುತ್ತಿದ್ದ ಬಿಬಿಎಂಪಿ, ಸೋಮವಾರದಂದು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಮಹದೇವಪುರ ವಲಯದಲ್ಲಿ ಕೆಲ ಬಡವಣೆಗಳು ಜಲಾವೃತಗೊಂಡಿದ್ದವು. ಹಾಗಾಗಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆಯನ್ನು ನಡೆಸಿತ್ತು. 

ನಗರದಲ್ಲಿ ಮಳೆಯಾದಾಗಲೆಲ್ಲ ರೈನೋ ಲೇಔಟ್ ಜಲಾವೃತವಾಗುತ್ತಿತ್ತು. ಹಾಗಾಗಿ ಸರಕಾರ ಅದನ್ನು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು, ಅದರ ಮೇಲೆ ನಿರ್ಮಾಣ ಮಾಡಿದ್ದ ವಿಲ್ಲಾಗಳನ್ನು ತೆರವುಗೊಳಿಸುವಂತೆ ನೊಟೀಸ್ ಜಾರಿ ಮಾಡಿತ್ತು. ಆದರೆ ನೊಟೀಸ್ ಕಾಲಾವಧಿ ಪೂರ್ಣಗೊಂಡಿದ್ದರೂ, ಯಾವುದೇ ಕ್ರಮಕ್ಕೆ ಸರಕಾರ ಮುಂದಾಗಲಿಲ್ಲ. 

ಮಹದೇವಪುರ ವಲಯದಲ್ಲಿ ಈಗಾಗಲೇ ನಲಪಾಡ್ ಅಕಾಡೆಮಿ, ವಿಪ್ರೋ, ಬಾಗ್ಮನೆ ಟೆಕ್‍ಪಾರ್ಕ್ ಸೇರಿ ಹಲವಾರ ಪ್ರತಿಷ್ಟಿತ ಕಂಪೆನಿಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿವೆ ಎಂದು ಬಿಬಿಎಂಪಿ ದಾಖಲೆಯನ್ನು ಬಿಡುಗಡೆ ಮಾಡಿದರೂ, ಇದುವರೆಗೂ ಯಾವುದೇ ತೆರವುಗೊಳಿಸಿಲ್ಲ. ಇನ್ನು ಈ ಹಿಂದಿನ ಸರ್ವೆಗಳು ಸರಿಯಾಗಿಲ್ಲ ಎಂದು ಬಿಬಿಎಂಪಿಯು ತಿಳಿಸಿದ್ದು, ಪುನಾಃ ಸರ್ವೇಯನ್ನು ಕೈಗೊಂಡಿದ್ದು, ಈಗ ಸರ್ವೇ ಕಾರ್ಯವನ್ನೂ ಸ್ಥಗಿತಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News