ರಶ್ಯ ಅನಿಲ ಪೈಪ್‌ಲೈನ್‌ಗಳಲ್ಲಿ ಸ್ವೀಡನ್, ಡೆನ್ಮಾರ್ಕ್ ಸಮೀಪ ಸೋರಿಕೆ

Update: 2022-09-27 17:52 GMT

ಸ್ಟಾಕ್‌ಹೋಮ್/ಕೋಪನ್‌ಹೇಗನ್, ಸೆ. 27: ಬಾಲ್ಟಿಕ್ ಸಮುದ್ರದ ತಳದಲ್ಲಿ ಹಾದು ಹೋಗಿರುವ ರಶ್ಯದ ಎರಡು ಅನಿಲ ಪೈಪ್‌ಲೈನ್‌ಗಳಲ್ಲಿ ಸ್ವೀಡನ್ ಮತ್ತು ಡೆನ್ಮಾರ್ಕ್ ಸಮೀಪ ದಿಢೀರ್ ಸೋರಿಕೆಗಳು ಸಂಭವಿಸಿವೆ ಹಾಗೂ ಅದರ ತನಿಖೆಗೆ ಯುರೋಪಿಯನ್ ದೇಶಗಳು ಮಂಗಳವಾರ ಮುಂದಾಗಿವೆ.

ಉಕ್ರೇನ್ ಮೇಲೆ ರಶ್ಯ ನಡೆಸುತ್ತಿರುವ ಯುದ್ಧದಿಂದಾಗಿ ಐರೋಪ್ಯ ದೇಶಗಳು ಎದುರಿಸುತ್ತಿರುವ ಇಂಧನ ಬಿಕ್ಕಟ್ಟಿನ ಮೂಲದಲ್ಲಿ ರಶ್ಯದ ಈ ಅನಿಲ ಪೈಪ್‌ಲೈನ್‌ಗಳಿವೆ.

ನಾರ್ಡ್ ಸ್ಟ್ರೀಮ್ ವನ್ ಪೈಪ್‌ಲೈನ್‌ನಲ್ಲಿ ಸುಮಾರು ಎರಡು ಸೋರಿಕೆಗಳು ಇರುವ ಬಗ್ಗೆ ಸ್ವೀಡನ್‌ನ ಸಮುದ್ರ ಪ್ರಾಧಿಕಾರವು ಎಚ್ಚರಿಕೆಯೊಂದನ್ನು ಹೊರಡಿಸಿದೆ. ಇದಕ್ಕಿಂತ ಸ್ವಲ್ಪ ಮೊದಲು, ಸಮೀಪದ ನಾರ್ಡ್ ಸ್ಟ್ರೀಮ್ 2 ಪೈಪ್‌ಲೈನ್‌ನಲ್ಲಿ ಸೋರಿಕೆ ಇರುವುದನ್ನು ಡೆನ್ಮಾರ್ಕ್ ಪತ್ತೆಹಚ್ಚಿತ್ತು. ಈ ಹಿನ್ನೆಲೆಯಲ್ಲಿ, ಸೋರಿಕೆಯ 5 ನಾಟಿಕಲ್ ಮೈಲ್ ತ್ರಿಜ್ಯದಲ್ಲಿ ಹಡಗುಗಳ ಚಲನೆಯನ್ನು ನಿಷೇಧಿಸಲಾಗಿದೆ.

ಯುರೋಪ್ ಮತ್ತು ಮಾಸ್ಕೋ ರಶ್ಯ ನಡುವಿನ ಇಂಧನ ಸಮರದಲ್ಲಿ ಈ ಎರಡು ಪೈಪ್‌ಲೈನ್‌ಗಳನ್ನು ರಶ್ಯವು ದಾಳಗಳನ್ನಾಗಿ ಬಳಸುತ್ತಿದೆ. ಹೀಗಾಗಿ, ಪಾಶ್ಚಿಮಾತ್ಯ ದೇಶಗಳಲ್ಲಿ ಅನಿಲ ಬೆಲೆಗಳು ಗಗನಕ್ಕೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News