ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಸಚಿವಾಲಯದ ನೌಕರರ ಸಂಘದಿಂದ ಮತ್ತೆ ಧರಣಿ ಎಚ್ಚರಿಕೆ

Update: 2022-09-28 08:11 GMT

ಬೆಂಗಳೂರು,ಸೆ.28: ಸಚಿವಾಲಯದ ನೌಕರರ ಸಂಘದ ನೌಕರರರು  ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ವೇತನ ಸೌಲಭ್ಯಗಳ ಪರಿಷ್ಕರಣೆ ಮಾಡಿ ಕೇಂದ್ರ ಸರ್ಕಾರ/ಹೈಕೋರ್ಟ್ ಮಾದರಿಯಲ್ಲಿ  7ನೇ ವೇತನ‌ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರ್ಕಾರಿ ನೌಕರರಿಗೆ ಭರವಸೆ ನೀಡಿದ್ದು, ಕಳೆದ ಜೂನ್ ತಿಂಗಳಿಗೆ 6ನೇ ವೇತನ ಆಯೋಗದ ಅವಧಿ ಮುಕ್ತಾಯಗೊಂಡಿದೆಯಾದರೂ  ಇದುಯವರೆಗೆ ಸರ್ಕಾರ ಬೇಡಿಕೆ ಈಡೇರಿಸಲು ಮುಂದಾಗಿಲ್ಲ.ಹೀಗಾಗಿ ಸಚಿವಾಲಯದ ನೌಕರರ ಸಂಘ ಹಾಗೂ ಇತರೆ ಸರ್ಕಾರಿ ನೌಕರರ ಸಂಘಟನೆಗಳ ವತಿಯಿಂದ "ಜಂಟಿ ಕ್ರಿಯಾ ಸಮಿತಿ" ರಚಿಸಿದ್ದು, ಜಂಟಿ ಕ್ರಿಯಾ ಸಮಿತಿಯಿಂದ   ಮತ್ತೆ ಪ್ರತಿಭಟನೆಗೆ ಮುಂದಾಗಿರುವುದಾಗಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಪಿ.ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News