ತಂದೆಗೊಂದು ಪಾತ್ರ

Update: 2022-09-28 12:08 GMT

ವಿಶೇಷ ನ್ಯಾಯಮಂಡಳಿಯಲ್ಲಿ ಪ್ರಕರಣದ ವಿಚಾರಣೆ ಅಂತಿಮ ಘಟ್ಟದಲ್ಲಿದ್ದು, ಇನ್ನೇನು ತೀರ್ಪು ಹೊರಬೀಳುವ ಸಂದರ್ಭದಲ್ಲಿದ್ದಾಗ, 7ನೇ ಅಕ್ಟೋಬರ್ 1930ರಂದು ನ್ಯಾಯಾಲಯದ ಅಂತಿಮ ಆದೇಶವಾಗುತ್ತದೆ. ಭಗತ್ ಸಿಂಗ್‌ನ ತಂದೆ ಸರದಾರ್ ಕಿಶನ್ ಸಿಂಗ್, ನ್ಯಾಯಮಂಡಳಿಗೆ ಲಿಖಿತ ಮನವಿಯೊಂದನ್ನು ಸಲ್ಲಿಸುತ್ತಾರೆ. ಸ್ಯಾಂಡರ್ಸ್ ಹತ್ಯೆಗೂ ಭಗತ್ ಸಿಂಗ್‌ನಿಗೂ ಯಾವುದೇ ಸಂಬಂಧವೂ ಇಲ್ಲವೆಂದು ತಿಳಿಸುತ್ತಾರೆ, ತನ್ನ ಮಗ ನಿರ್ದೋಷಿ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳು ಇರುವುದಾಗಿ ಹೇಳುತ್ತ ತಾನು ನಿರಪರಾಧಿ ಎಂದು ಸಾಬೀತುಪಡಿಸಲು ತನ್ನ ಮಗನಿಗೆ ಇನ್ನೊಂದು ಅವಕಾಶ ನೀಡಬೇಕೆಂದು ಭಗತ್ ಸಿಂಗ್‌ನ ತಂದೆ ನ್ಯಾಯಾಧೀಶರನ್ನು ಕೇಳಿಕೊಳ್ಳುತ್ತಾರೆ. ಈ ವಿಷಯ ಭಗತ್ ಸಿಂಗ್‌ರ ಕಿವಿಗೆ ಬಿದ್ದೊಡನೆಯೇ ಅವರು ಕೆಂಡಾಮಂಡಲವಾಗುತ್ತಾರೆ. ತನ್ನ ತಂದೆಯ ಈ ಕೃತ್ಯಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿ ಅವರಿಗೆ ಒಂದು ಪತ್ರ ಬರೆಯುತ್ತಾರೆ.

4ನೇ ಆಕ್ಟೋಬರ್ 1930

ನನ್ನ ಪ್ರೀತಿಯ ಅಪ್ಪನಿಗೆ

ಅವರೊಂದಿಗೆ ಮೂರು ವರ್ಷ ದುಡಿದ ನನಗೆ ಅವರೊಂದು ಸದಾ ದಾರಿ ತೋರುವ ಬೆಳಕು. ಪ್ರತಿಯೊಂದು ನೆನಪೂ ಕಲಿಕೆಯ ಒಂದಂಶದ ಮೇಲೆ ಬೆಳಕು ಚೆಲ್ಲುತ್ತಿದೆ. ಇಂದು ದೇಶಾದ್ಯಂತ ದೇಸೀ ತಳಿ, ಸಾವಯವ ಒಳಸುರಿಗಳು, ಸಾವಯವ ಕೃಷಿ ಇತ್ಯಾದಿ ದೊಡ್ಡ ಮಟ್ಟದ ಸರಕಾರಿ ಯೋಜನೆಗಳಾಗಿಯೂ ಬೆಳೆದಿದ್ದರೆ ಅದರ ಹಿಂದೆ ವನಜಾ ಅವರ ಕೊಡುಗೆಯಿದೆ. ನಮ್ಮ ರಾಜ್ಯದಲ್ಲಿ ಈ ಪರ್ಯಾಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಬಹುತೇಕರು ಗ್ರೀನ್ ಫೌಂಡೇಶನ್‌ನಲ್ಲಿ ವನಜಾ ಅವರ ಶಿಷ್ಯತ್ವದ ಮೂಲಕ ಕಲಿತವರು.ನೀನು ನನ್ನ ಪರ ವಾದಿಸುವ ವಿಚಾರದಲ್ಲಿ ವಿಶೇಷ ನ್ಯಾಯಮಂಡಳಿಯ ಸದಸ್ಯರಿಗೆ ಒಂದು ಮನವಿಯನ್ನು ಸಲ್ಲಿಸಿದ್ದೀಯೆಂದು ತಿಳಿದು ದಿಗ್ಭ್ರಮೆಗೊಂಡೆ. ಈ ನಿನ್ನ ಅತಿ ಬುದ್ಧಿವಂತಿಕೆಯಿಂದಾಗಿ ನಾನು ನೆಮ್ಮದಿ ಕಳೆದುಕೊಳ್ಳುವಷ್ಟರ ಮಟ್ಟಿಗೆ ತೀವ್ರ ಪೆಟ್ಟು ತಿಂದಿದ್ದೇನೆ. ಇದು ಒಟ್ಟಾರೆ ನನ್ನ ಮಾನಸಿಕ ಸಮತೋಲನವನ್ನೇ ಬುಡಮೇಲು ಮಾಡಿಬಿಟ್ಟಿದೆ. ಈ ಹಂತದಲ್ಲಿ ಮತ್ತು ಈ ಪರಿಸ್ಥಿತಿಯಲ್ಲಿ ಅಂತಹದೊಂದು ಮನವಿ ಸಲ್ಲಿಸುವುದು ಸರಿಯೆಂದು ನೀನು ಹೇಗೆ ತಾನೇ ಯೋಚಿಸಿದೆ? ನನಗೊಂದೂ ತೋಚದಾಗಿದೆ. ಒಬ್ಬ ತಂದೆಯ ಸ್ಥಾನದಲ್ಲಿ ನಿಂತಿರುವ ನಿನ್ನ ಮನಸ್ಸಿನ ಎಲ್ಲಾ ಭಾವನೆ ಅನಿಸಿಕೆಗಳನ್ನು ನಾನು ಒಪ್ಪಿಕೊಂಡರೂ, ನನ್ನ ಸಲಹೆಯನ್ನೂ ಪಡೆಯದೆ ನನ್ನ ಪರವಾಗಿ ಅಂತಹದ್ದೊಂದು ಹೆಜ್ಜೆಯನ್ನಿಡಲು ನಿನ್ನಲ್ಲಿ ಅಧಿಕಾರವಿತ್ತೆಂದು ನನಗನಿಸದು. ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮಿಬ್ಬರ ನಿಲುವುಗಳ ನಡುವೆ ಯಾವಾಗಲೂ ಅಂತರವಿದೆ ಎಂಬುದು ನಿನಗೆ ತಿಳಿದಿದೆ. ನೀನು ಒಪ್ಪಿಗೆ ಕೊಟ್ಟರೆ ಕೊಡು ಇಲ್ಲವೇ ಬಿಡು, ಅದರ ಕಡೆ ಲಕ್ಷ ನೀಡದೆ ನಾನು ಯಾವಾಗಲೂ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುತ್ತೇನೆ.

ಮೊದಲಿನಿಂದಲೂ ನನ್ನ ಪ್ರಕರಣವನ್ನು ನಾನೇ ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಹೋರಾಡಲು ಮತ್ತು ನನ್ನ ಪರವಾಗಿ ನಾನೇ ಸಮರ್ಪಕವಾಗಿ ವಾದ ಮಂಡಿಸುವಂತೆ ನೀನು ನನ್ನ ಮನವೊಲಿಸಲು ಪ್ರಯತ್ನಿಸಿದ್ದು ನಿನಗೆ ನೆನಪಿರಬಹುದು.

ಆದರೆ ನಾನು ಅದನ್ನು ಯಾವಾಗಲೂ ವಿರೋಧಿಸಿದ್ದೆ ಎಂಬುದೂ ನಿನಗೆ ಗೊತ್ತಿದೆ. ನನ್ನ ಸ್ವಯಂರಕ್ಷಣೆ ಮಾಡಿಕೊಳ್ಳುವ ಯಾವ ಆಸಕ್ತಿಯೂ ನನ್ನಲ್ಲಿರಲಿಲ್ಲ. ಅದರ ಬಗ್ಗೆ ನಾನು ಒಂದೇ ಒಂದು ಕ್ಷಣವೂ ಗಂಭೀರವಾಗಿ ಯೋಚಿಸಿದ್ದಿಲ್ಲ. ಅದೊಂದು ಬರೀ ಸಿದ್ಧಾಂತವೋ ಅಥವಾ ನನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದ ನನ್ನ ವಾದವೋ, ಅದು ಬೇರೆಯೇ ಪ್ರಶ್ನೆ. ಅದನ್ನು ಇಲ್ಲಿ ಚರ್ಚಿಸಲಾಗದು.

ಈ ವಿಚಾರಣೆಯಲ್ಲಿ ಒಂದು ನಿರ್ದಿಷ್ಟ ನೀತಿಯನ್ನು ಅನುಸರಿಸುತ್ತಿದ್ದೇವೆ ಎಂಬುದು ನಿನ್ನ ಗಮನದಲ್ಲಿರಬಹುದು. ನನ್ನ ಪ್ರತಿಯೊಂದು ಕ್ರಿಯೆಯೂ ಈ ನೀತಿಯೊಂದಿಗೆ, ನಾನು ನಂಬಿರುವ ತತ್ವ ಸಿದ್ಧಾಂತಗಳೊಂದಿಗೆ, ನನ್ನ ಕಾರ್ಯಕ್ರಮದೊಂದಿಗೆ ಹೊಂದಿಕೊಳ್ಳುವಂತಿರಬೇಕು. ಇಂದಿನ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ಹಾಗೊಂದು ವೇಳೆ ಸಂದರ್ಭಸೂಕ್ತ ಎನಿಸಿದರೂ ಸ್ವಯಂರಕ್ಷಣೆ ಮಾಡಿಕೊಳ್ಳುವ ವ್ಯಕ್ತಿ ನಾನಾಗುತ್ತಿರಲಿಲ್ಲ ಎನ್ನುವುದಂತೂ ನಿಶ್ಚಿತವೇ. ವಿಚಾರಣೆಯಾದ್ಯಂತ ನಾನು ಏಕೈಕ ಉದ್ದೇಶ ಹೊಂದಿದ್ದೆ. ನಮ್ಮ ವಿರುದ್ಧ ಎಷ್ಟೇ ಗಹನವಾದ ಆಪಾದನೆಗಳಿದ್ದರೂ ನಾವು ವಿಚಾರಣೆಯ ಬಗ್ಗೆ ಸಂಪೂರ್ಣ ಉಪೇಕ್ಷೆ ತೋರುವುದೇ ನಮ್ಮ ಉದ್ದೇಶವಾಗಿತ್ತು. ರಾಜಕೀಯ ಕಾರ್ಯಕರ್ತರು ನ್ಯಾಯಾಲಯಗಳಲ್ಲಿ ಕಾನೂನಾತ್ಮಕ ಹೋರಾಟ ನಡೆಸುವುದರ ಕುರಿತು ಅರೆಕ್ಷಣವೂ ಚಿಂತಿಸಬಾರದೆಂದು, ಅದರ ಬಗ್ಗೆ ಉದಾಸೀನ ತೋರಬೇಕೆಂದು ಹಾಗೂ ತಮಗೆ ವಿಧಿಸಲಾದ ಅತಿ ಘೋರ ಶಿಕ್ಷೆಗಳನ್ನೂ ಕೆಚ್ಚೆದೆಯಿಂದ ಎದುರಿಸಬೇಕೆಂದು ಅಭಿಪ್ರಾಯಪಟ್ಟಿದ್ದೆ. ತಮ್ಮ ಪರವಾಗಿ ತಾವು ವಾದ ಮಂಡಿಸಿಕೊಳ್ಳಬಹುದಾಗಿದ್ದರೂ ಅದು ಯಾವಾಗಲೂ ಪರಿಪೂರ್ಣ ರಾಜಕೀಯ ವಿವೇಚನೆಯಿಂದ ನಡೆಯಬೇಕೇ ಹೊರತು ವೈಯಕ್ತಿಕ ಹಿತದೃಷ್ಟಿಯಿಂದಲ್ಲ. ಹಾಲಿ ವಿಚಾರಣೆಯ ಸಂದರ್ಭದಲ್ಲಿ ಇದೇ ಸೂತ್ರವನ್ನು ನಮ್ಮ ನೀತಿಯನ್ನಾಗಿ ನಿರಂತರವಾಗಿ ಕಾಪಿಟ್ಟುಕೊಳ್ಳಲಾಗಿತ್ತು. ಅದರಲ್ಲಿ ಯಶಸ್ಸು ಗಳಿಸಿದೆವೋ ಇಲ್ಲವೋ ಎಂದು ತೀರ್ಮಾನಿಸುವುದು ನನಗೆ ಸಂಬಂಧಿಸಿದ ವಿಷಯವಲ್ಲ. ನಾವು ನಮ್ಮ ಸ್ವಹಿತಾಸಕ್ತಿಗಳನ್ನು ಬದಿಗಿಟ್ಟೇ ಯಾವಾಗಲೂ ನಮ್ಮ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದೇವೆ.

ಕಾನೂನು ಮತ್ತು ನ್ಯಾಯ ಇವೆರಡನ್ನೂ ನಿಂದನೆಗೆ ಗುರಿಪಡಿಸಲು ಈ ಪ್ರಕರಣದ ಆಪಾದಿತರು ಯತ್ನಿಸುತ್ತಿದ್ದಾರೆಂದು ಲಾಹೋರ್ ಪಿತೂರಿ ಮೊಕದ್ದಮೆ ಅಧ್ಯಾದೇಶದ ಪಠ್ಯದ ಜೊತೆಗಿದ್ದ ಹೇಳಿಕೆಯಲ್ಲಿ ವೈಸ್‌ರಾಯ್ ನುಡಿದಿದ್ದ. ಕಾನೂನನ್ನು ನಿಂದನೆಗೆ ಒಳಪಡಿಸಲು ನಾವು ಯತ್ನಿಸುತ್ತಿದ್ದೇವೋ ಅಥವಾ ಬೇರೆ ಯಾರಾದರೂ ಆ ಕೆಲಸವನ್ನು ಮಾಡುತ್ತಿದ್ದರೋ ಎಂದು ಸಾರ್ವಜನಿಕರಿಗೆ ರುಜುವಾತುಪಡಿಸಲು ಈ ಸಂದರ್ಭ ನಮಗೆ ಅವಕಾಶವನ್ನು ಒದಗಿಸಿತು. ಈ ವಿಷಯದಲ್ಲಿ ಜನರು ನಮ್ಮನ್ನು ಒಪ್ಪದಿರಬಹುದು. ನೀನೂ ಅವರ ಪೈಕಿ ಒಬ್ಬನಾಗಿರಲೂಬಹುದು. ಆದರೆ ನನ್ನ ಸಮ್ಮತಿಯಿಲ್ಲದೆ ಅಥವಾ ನನ್ನ ಅರಿವಿಗೂ ಬಾರದಂತೆ ನನ್ನ ಪರವಾಗಿ ನೀನು ಅಂತಹ ಹೆಜ್ಜೆ ಇಡಬೇಕೆಂದು ಅರ್ಥವಲ್ಲ. ನನ್ನ ಜೀವವು ಅಷ್ಟೊಂದು ಅಮೂಲ್ಯವಾದುದೆಂದು ನನಗಾದರೂ ಅನಿಸದು. ಬಹುಶಃ ನೀನು ಹಾಗೆಂದೇ ತಿಳಿದಿದ್ದಿಯೋ ಏನೋ, ನಾನು ನಂಬಿದ ಸಿದ್ಧಾಂತದ ಬೆಲೆ ತೆತ್ತು ನನ್ನ ಜೀವವನ್ನು ಕೊಳ್ಳುವುದು ಖಂಡಿತ ಯೋಗ್ಯವಲ್ಲ. ನನ್ನಷ್ಟೇ ಗಂಭೀರವಾಗಿ ಮೊಕದ್ದಮೆ ಎದುರಿಸುತ್ತಿರುವ ನನ್ನ ಬೇರೆ ಸಂಗಾತಿಗಳೂ ಇದ್ದಾರೆ. ನಾವೆಲ್ಲರೂ ಒಂದೇ ಸೂತ್ರವನ್ನು ಅಳವಡಿಸಿಕೊಂಡಿದ್ದೆವು. ವೈಯಕ್ತಿಕವಾಗಿ ಎಷ್ಟೇ ಅಧಿಕ ಬೆಲೆ ತೆರಬೇಕಾಗಿ ಬಂದರೂ ಪರವಾಗಿಲ್ಲ, ನಾವು ಕೊನೆಯವರೆಗೂ ನಮ್ಮ ನಿಲುವಿಗೆ ಬದ್ಧರಾಗಿಯೇ ನಿಲ್ಲುತ್ತೇವೆ.

 ಅಪ್ಪ, ನಾನು ತುಂಬ ದಿಗ್ಭ್ರಾಂತನಾಗಿದ್ದೇನೆ. ನೀನು ಇಟ್ಟಿರುವ ಈ ಹೆಜ್ಜೆಯನ್ನು ಖಂಡಿಸುವಾಗ ಅಥವಾ ಪರಾಮರ್ಶಿಸುವಾಗ ನಾನು ರೀತಿ, ರಿವಾಜು ಎಂಬ ಸಾಮಾನ್ಯ ರೂಢಿಯನ್ನು ಎಲ್ಲಿ ಮೀರುತ್ತೇನೋ ಎಂದು ಭಯಭೀತಗೊಂಡಿದ್ದೇನೆ. ಅಲ್ಲದೆ ನನ್ನ ಭಾಷೆಯೂ ಕೊಂಚ ಒರಟಾಗಿಬಿಡಬಹುದೇನೋ. ನೇರವಾಗಿ ಹೇಳಿಬಿಡುತ್ತೇನೆ, ಕೇಳು. ಇದೀಗ ನನ್ನ ಬೆನ್ನಿಗೇ ಚೂರಿ ಹಾಕಲಾಗಿದೆಯೇನೊ ಎನ್ನುವಂತೆ ನನಗೆ ಭಾಸವಾಗುತ್ತಿದೆ. ಈ ಕೆಲಸವನ್ನು ಬೇರೆ ಯಾರಾದರೂ ಮಾಡಿದ್ದರೆ, ನಾನು ಅದನ್ನು ವಿಶ್ವಾಸದ್ರೋಹ ಎಂದು ಕರೆಯುತ್ತಿದ್ದೆ. ಆದರೆ ನಿನ್ನ ವಿಚಾರದಲ್ಲಿ ಅದನ್ನು ನಾನು ದೌರ್ಬಲ್ಯ - ಅತ್ಯಂತ ಕೆಟ್ಟ ಬಗೆಯ ದೌರ್ಬಲ್ಯ ಎಂದು ಹೇಳುತ್ತೇನೆ.

ಇದು ಎಲ್ಲರ ಅಂತಃಸತ್ವವನ್ನೂ ಪರೀಕ್ಷೆಗೊಳಪಡಿಸುವ ಕಾಲವಾಗಿತ್ತು. ಅಪ್ಪ ನೀನು ಇದರಲ್ಲಿ ಸೋತಿದ್ದೀಯ ಎಂದೇ ನಾನು ಹೇಳುವೆ. ನೀನು ಅಪ್ರತಿಮ ದೇಶಭಕ್ತ ಎಂದು ನನಗೆ ಗೊತ್ತಿದೆ. ನೀನು ಒಬ್ಬ ನಿಷ್ಠಾವಂತ ದೇಶಪ್ರೇಮಿಯೂ ಹೌದೆಂದು ನಾನು ಬಲ್ಲೆ. ಭಾರತದ ವಿಮೋಚನಾ ಚಳವಳಿಗಾಗಿ ನೀನು ನಿನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೀಯೆಂದೂ ನನಗೆ ಗೊತ್ತಿದೆ. ಆದರೆ ಈ ಕ್ಷಣದಲ್ಲಿ ಇಂತಹ ದೌರ್ಬಲ್ಯವನ್ನೇಕೆ ನೀನು ಪ್ರಕಟಿಸಿರುವೆ? ನನಗೆ ಅರ್ಥವಾಗುತ್ತಿಲ್ಲ.

ಅಂತಿಮವಾಗಿ ನನ್ನ ಪ್ರಕರಣದಲ್ಲಿ ಆಸಕ್ತಿ ಹೊಂದಿರುವ ನಿನಗೂ, ನನ್ನ ಇತರ ಸ್ನೇಹಿತರಿಗೂ ಮತ್ತು ಬೇರೆಲ್ಲರಿಗೂ ನಾನು ಹೇಳಲು ಬಯಸುವುದಿಷ್ಟೆ. ನಿನ್ನ ನಡೆಯನ್ನು ನಾನು ಖಂಡಿತ ಒಪ್ಪಿಲ್ಲ. ಈ ಕ್ಷಣದಲ್ಲೂ ನನ್ನ ಪರವಾಗಿ ವಾದ ಮಂಡಿಸಲು ನಾನು ಉತ್ಸುಕನಾಗಿಲ್ಲ. ಪ್ರತಿವಾದ, ಇತ್ಯಾದಿಗಳ ಕುರಿತು ನನ್ನ ಕೆಲವು ಸಹ-ಆಪಾದಿತರು ಸಲ್ಲಿಸಿದ್ದ ಅರ್ಜಿಯನ್ನು ಹಾಗೊಮ್ಮೆ ನ್ಯಾಯಾಲಯ ಮಾನ್ಯಗೊಳಿಸಿದ್ದರೂ ನನ್ನ ಪರವಾಗಿ ವಾದಿಸುವ ಗೊಡವೆಗೆ ನಾನು ಹೋಗುತ್ತಿರಲಿಲ್ಲ. ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿನ ನನ್ನ ಸಂದರ್ಶನದ ಕುರಿತು ನ್ಯಾಯಮಂಡಳಿಗೆ ಸಲ್ಲಿಸಲಾಗಿದ್ದ ನನ್ನ ಅರ್ಜಿಗಳನ್ನು ತಪ್ಪಾಗಿ ಅರ್ಥೈಸಲಾಗಿ ನಾನು ಪ್ರತಿವಾದವನ್ನು ಒದಗಿಸಲಿದ್ದೇನೆಂದು ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು, ಆದರೆ ವಾಸ್ತವದಲ್ಲಿ ನಾನು ಯಾವುದೇ ಪ್ರತಿವಾದವನ್ನೂ ಮಂಡಿಸಲು ಇಚ್ಛಿಸಿರಲಿಲ್ಲ. ಇಂದೂ ಕೂಡ ನಾನು ಆ ದಿನದ ಅಭಿಪ್ರಾಯವನ್ನೇ ಹೊಂದಿದ್ದೇನೆ. ಇದನ್ನು ಬಾಲ ಕಾರಾಗೃಹದಲ್ಲಿರುವ ನನ್ನ ಸ್ನೇಹಿತರು ನಾನು ಎಸಗುವ ವಿಶ್ವಾಸದ್ರೋಹ ಮತ್ತು ವಂಚನೆ ಎಂಬುದಾಗಿ ಪರಿಗಣಿಸುತ್ತಾರೆ. ಅವರೆದುರು ನನ್ನ ನಿಲುವನ್ನು ಸ್ಪಷ್ಟಪಡಿಸಲು ನನಗೆ ಒಂದೇ ಒಂದು ಅವಕಾಶವೂ ಸಿಗುವುದಿಲ್ಲ. ಈ ಗೊಂದಲದ ಬಗೆಗಿನ ವಿವರಗಳನ್ನೆಲ್ಲ ಜನತೆ ತಿಳಿಯಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ ಈ ಪತ್ರವನ್ನು ಪ್ರಕಟಿಸಬೇಕೆಂದು ನಾನು ವಿನಂತಿಸುತ್ತಿದ್ದೇನೆ.

-ನಿನ್ನ ಪ್ರೀತಿಯ ಮಗ

ಭಗತ್‌ಸಿಂಗ್

(ಭಗತ್ ಸಿಂಗ್ ಜನ್ಮದಿನದ ಹಿನ್ನಲೆಯಲ್ಲಿ, ನವಕರ್ನಾಟಕ ಪ್ರಕಾಶನದಿಂದ ಪ್ರಕಟಿತ ‘ಭಗತ್ ಸಿಂಗ್ ಇಂಕ್ವಿಲಾಬ್ ಜಿಂದಾಬಾದ್!-ಆಯ್ದ ಬರಹಗಳು ಮತ್ತು ಭಾಷಣಗಳು’ ಕೃತಿಯಿಂದ ಆಯ್ದ ಭಾಗ) 

Writer - ಕನ್ನಡಕ್ಕೆ: ಜ್ಯೋತಿ ಎ.

contributor

Editor - ಕನ್ನಡಕ್ಕೆ: ಜ್ಯೋತಿ ಎ.

contributor

Similar News