ಸುಳ್ಳು ಹೇಳೋದ್ರಲ್ಲಿ ನಳಿನ್ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ: ಯು.ಟಿ. ಖಾದರ್

Update: 2022-09-28 14:24 GMT

ಮಂಗಳೂರು: ನಳಿನ್ ಕುಮಾರ್ ಕಟೀಲ್ ಅವರು ರಾಜಕಾರಣದಲ್ಲಿ ಗಾಳಿಯಲ್ಲಿ ಗುಂಡು ಹೊಡೆದು ವಿಕೃತ ಆನಂದ ಪಡುವ ವಿಚಾರದಲ್ಲಿ ಅತ್ಯಂತ ಹೆಸರುವಾಸಿ. ಸುಳ್ಳು ಹೇಳೋದು, ನಂತರ ಸುಳ್ಳಿನ ಮೇಲೆ ರಾಜಕಾರಣ ಮಾಡೋದು. ಇದು ವಿಘ್ನ ಸಂತೋಷಿಗಳ ಲಕ್ಷಣ. ಸುಳ್ಳು ಹೇಳೋದರಲ್ಲಿ ನಳಿನ್ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ಪಿಎಫ್‍ಐ ನಿಷೇಧ ಮಾಡಲು ಯು.ಟಿ. ಖಾದರ್ ಕಣ್ಣೀರು ಹಾಕಿದ್ದರೆಂದು ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ, "ನಳಿನ್ ಮುಂದೆ ಕಣ್ಣೀರು ಹಾಕುವ ಅವಶ್ಯಕತೆ ನನಗಿಲ್ಲ. ತಾನು ಮಾಡಿದ ಕೆಲಸವನ್ನು ನಾನೇ ಮಾಡಿದ್ದು ಎಂದು ಹೇಳುವಷ್ಟು ಸಾಮರ್ಥ್ಯ, ಧೈರ್ಯವಿಲ್ಲದವರು ಈ ರೀತಿಯ ಆಪಾದನೆ ಮಾಡುವುದು ಸಹಜ. ನಿಮಗೆ ನಿಜವಾದ ದೇಶಭಕ್ತಿಯಿದ್ದಲ್ಲಿ, ಧರ್ಮದ ಆಧಾರದಲ್ಲಿ ವಿಷ ಬೀಜ ಬಿತ್ತಿ ಸಮಾಜ ಸ್ವಾಸ್ಥ್ಯ ಕೆಡಿಸುವ, ಭಾರತದ ಶ್ರೇಷ್ಠ ಸಂವಿಧಾನವನ್ನು ವಿರೋಧಿಸಿ ಕಾನೂನು ಕೈಗೆತ್ತಿಕೊಳ್ಳುವ ಎಲ್ಲಾ ಸಂಘಟನೆಗಳನ್ನೂ ನಿಷೇಧ ಮಾಡಿ" ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News