ತುಳು ಭಾಷೆ ಸಂರಕ್ಷಣಾ ಸಮಿತಿ ಪ್ರತಿಭಟನೆ

Update: 2022-09-29 15:38 GMT

ಮಂಗಳೂರು, ಸೆ.29: ನಗರದ ಸರಕಾರಿ ಕಚೇರಿ ಹಾಗೂ ಬಸ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಿ ತುಳು ಭಾಷೆಯ ಮೇಲೆ ಸವಾರಿ ಮಾಡಿದ್ದಲ್ಲದೆ ದ.ಕ. ಜಿಲ್ಲೆ ಸಹಿತ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದ ಸಚಿವ ಸುನೀಲ್ ಕುಮಾರ್‌ರ ಹೇಳಿಕೆಯ ವಿರುದ್ಧ ಗುರುವಾರ ನಗರದ ಮಿನಿ ವಿಧಾನಸೌಧದ ಮುಂದೆ ‘ತುಳು ಭಾಷೆ ಸಂರಕ್ಷಣಾ ಸಮಿತಿ’ಯ ವತಿಯಿಂದ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ತುಳು ಪರವಾಗಿ ಹೋರಾಟ ಮಾಡುವವರಿಗೆ ಸಹಕಾರದ ಭರವಸೆ ನೀಡಿದರು. ನವರಾತ್ರಿ ಉತ್ಸವ ಮುಗಿದ ಕೂಡಲೇ ತುಳು ಅಧಿಕೃತ ಹಾಗೂ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ತುಳು ಸಂಘಟನೆಗಳನ್ನು ಒಗ್ಗೂಡಿಸಿ ಸಭೆ ನಡೆಸುವುದಾಗಿ ತಿಳಿಸಿದರು.

ಮಂಗಳೂರಿನಲ್ಲಿ ತುಳು ಲಿಪಿ ಬೋರ್ಡು ಹಾಕುವ ಬಗ್ಗೆ ಯಾರು ಅಡ್ಡಿ ಮಾಡುವುದಿಲ್ಲ. ಬಸ್ಸಿಗೆ ಬೇಕಾದವರು ಹಾಕಬಹುದು. ತನ್ನ (ಶಾಸಕರ) ಕಚೇರಿಯಲ್ಲಿ ಕೂಡ ತುಳುಲಿಪಿ ಬೋರ್ಡ್ ಇದೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.

ಬಳಿಕ ತುಳು ಸಂರಕ್ಷಣಾ ಸಮಿತಿಯ ಪ್ರಮುಖರು ’ಒರಿಪುಲೆ ಒರಿಪುಲೆ ತುಳು ಭಾಷೆ ಒರಿಪುಲೆ’ ಪೋಷಣೆ ಕೂಗಿ ಬಸ್ಸಿಗೆ ತುಳು ಲಿಪಿ ಚಾಟ್ ಅಂಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News