ಮಂಗಳೂರು ವಿವಿ 43ನೇ ಸಂಸ್ಥಾಪನಾ ದಿನಾಚರಣೆ : ಸಾಧಕರಿಗೆ ಸನ್ಮಾನ

Update: 2022-09-29 17:16 GMT

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ 43ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಗುರುವಾರ ಮಂಗಳ ಗಂಗೋತ್ರಿ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆಯಿತು.

ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣಕ್ಕೆ‌ ಮಾತ್ರ ಸೀಮಿತವಾಗದೆ ಅನ್ವೇಷಣಾ ಕೇಂದ್ರಗಳಾಗಿ ರೂಪುಗೊಳ್ಳ ಬೇಕಿದೆ. ಪಠ್ಯ ಪುಸ್ತಕಗಳ ವಿಚಾರಗಳ ಬಗ್ಗೆ ರಾಜಕೀಯ ಎಂದಿಗೂ ಸಲ್ಲ. ನಮ್ಮ‌ಜೀವನಕ್ಕೆ ಪೂರಕವಾದ ಪಠ್ಯಗಳೇ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ತರಬೇತುದಾರ ಡಾ. ಭರತ್ ಚಂದ್ರ ಸಂಸ್ಥಾಪನಾ ದಿನಾಚರಣೆಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜೀವನದಲ್ಲಿ ನಾವು ಹೊಂದಿರುವ ಗುರಿಯ ಬಗ್ಗೆ ಸ್ಪಷ್ಟವಾಗಿರಬೇಕು. ಕಷ್ಟಪಟ್ಟು ಪಡುವ ಕೆಲಸಕ್ಕಿಂತ  ಸಮಯದ ಸದುಪಯೋಗದೊಂದಿಗೆ ತೀಕ್ಷ್ಣ ಬುದ್ದಿಯಿಂದ ಕೆಲಸ ಮಾಡಬೇಕಿದೆ. ನಮ್ಮಲ್ಲಿ ಜಡತ್ವದ ಭಾವನೆಯಿದ್ದರೆ ಜೀವನದಲ್ಲಿ ಯಶಸ್ಸು ಖಂಡಿತಾ ಸಾಧ್ಯವಿಲ್ಲ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಡುಪಿ. ದ.ಕ, ಕೊಡಗು ವಲಯದ ಸಾಂಸ್ಕೃತಿಕ ವಿಚಾರಗಳಿಗೆ ಸಂಬಂಧಿಸಿ ಸಾಂಸ್ಕೃತಿಕ ನೀತಿ  ವಿವಿಯಲ್ಲಿ ಶೀಘ್ರವೇ ಆರಂಭಗೊಳ್ಳಲಿದೆ. ಅಲ್ಲದೆ ಬೆಳಪುವಿನಲ್ಲಿ ಸ್ನಾತಕೋತ್ತರ ಕೇಂದ್ರವು ಈ ವರ್ಷವೇ ಆರಂಭಗೊಳ್ಳಲಿದೆ. ಹೀಗೆ ವಿವಿಯ ಅಭಿವೃದ್ಧಿಗೆ ಎಲ್ಲರ ಸಹಕಾರವೇ ಕಾರಣವಾಗಿದೆ. ವಿವಿಧ ಕ್ಷೇತ್ರಗಳ ಸಾಧಕರಾದ  ಗೌರವಿಸಿರುವುದು ನಮಗೆ ಹೆಮ್ಮೆಯಾಗಿದೆ ಎಂದರು.

ವೇದಿಕೆಯಲ್ಲಿ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ್ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಪಿ.ಎಲ್ .ಧರ್ಮ, ಹಣಕಾಸು ಅಧಿಕಾರಿ ಪ್ರೊ.ಜಯಪ್ಪ ಉಪಸ್ಥಿತರಿದ್ದರು.

ಕುಲಸಚಿವರಾದ ಡಾ.ಕಿಶೋರ್ ಕುಮಾರ್ ಅವರು ಸ್ವಾಗತಿಸಿದರು. ಸಂಯೋಜಕರಾದ ಪ್ರೊ.ಮಂಜುನಾಥ ಪಟ್ಟಾಬಿ ವಂದಿಸಿದರು. ಡಾ.ಧನಂಜಯ ಕುಂಬ್ಳೆ ಹಾಗೂ ಡಾ. ಪ್ರೀತಿ ಕೀರ್ತಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ

ಸಮಾರಂಭದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಸಾಧಕರಾದ ಅಮೈ ಮಹಾಲಿಂಗನಾಯ್ಕ್ , ಸ್ವಾಮಿ ಏಕಗಮ್ಯಾನಂದ ಸ್ವಾಮೀಜಿ, ಡಾ.ಕೆ.ವಿ.ರಾವ್, ಬಿ.ಎಂ.ರೋಹಿಣಿ, ಹಾಜಿ ಯು.ಕೆ.ಮೋನು, ಡಾ.ಎಂ.ಜಗದೀಶ್ ಶೆಟ್ಟಿ, ವಾಮನ್ ಕಾಮತ್, ನಂದಳಿಕೆ ಬಾಲಚಂದ್ರರಾಯರು, ಡಾ.ಅಣ್ಣಯ್ಯ ಕುಲಾಲ್, ವಿದ್ವಾನ್ ನಾರಾಯಣ, ಆರ್ ಕೆ.ಶೆಟ್ಟಿ, ಎಸ್ ಎಸ್ ನಾಯಕ್, ಶಿವರಾಮ ಭಂಡಾರಿ, ರೋನ್ಸ್ ಬಂಟ್ವಾಳ, ಗುರುವಪ್ಪ ಬಾಳೆಪುಣಿ, ರವಿ ಕಕ್ಕೆಪದವು, ಮಾಧವ ಬಂಟ್ವಾಳ, ಲಾಲ್ ಗೋಯಲ್, ವಿಜಯ್ ಐತಾಳ್, ರೊಶಲ್ ಡಿಸೋಜ,ರವಿ ಕಟಪಾಡಿ,  ಶ್ಯಾಂ ಪ್ರಸಾದ್ ವಿ ಆರ್, ರಶ್ಮೀ ಜೆ. ಅಂಚನ್, ಸಯ್ಯರ್ ಅನ್ವರ್ ಹುಸೈನ್ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News