ಮೋದಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿಯವರ ಮೇಲೆ ಏಕೆ IT, CBI, ED ದಾಳಿ ನಡೆಸಿಲ್ಲ?: ದಿನೇಶ್ ಗುಂಡೂರಾವ್

Update: 2022-09-30 04:49 GMT

ಬೆಂಗಳೂರು, ಸೆ.30: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆಯ ಮೇಲೆ ಸಿಬಿಐ ರಾಜಕೀಯ ಪ್ರೇರಿತ ದಾಳಿ ನಡೆಸಿದೆ ಎಂದು ಆರೋಪಿಸಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್, 40% ಕಮಿಷನ್ ದಂಧೆ ನಡೆಸುತ್ತಿರುವ ರಾಜ್ಯ BJP ನಾಯಕರ ಮೇಲ್ಯಾಕೆ ತನಿಖಾ ಸಂಸ್ಥೆಗಳು ದಾಳಿ ನಡೆಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಮೋದಿಯವರು ಅಧಿಕಾರಕ್ಕೆ ಬಂದ 8 ವರ್ಷದ ಅವಧಿಯಲ್ಲಿ ಒಬ್ಬನೇ ಒಬ್ಬ ಬಿಜೆಪಿಯವರ ಮೇಲೆ IT, CBI & ED ದಾಳಿ ನಡೆಸಿಲ್ಲ. ಈ ತನಿಖಾ ಸಂಸ್ಥೆಗಳಿಗೆ ಕೇವಲ ವಿಪಕ್ಷದವರೇ ಟಾರ್ಗೆಟ್. ಹಾಗಾದರೆ BJPಯಲ್ಲಿರುವವರು ಮಾತ್ರ ಸಚ್ಚಾರಿತ್ರ್ಯವುಳ್ಳ ಸದ್ಗುಣ ಸಂಪನ್ನರೆ.? ಅಥವಾ ಪರಮ ಪ್ರಾಮಾಣಿಕರೇ ಎಂದು ವ್ಯಂಗ್ಯವಾಡಿದ್ದಾರೆ. ಡಿ.ಕೆ. ಶಿವಕುಮಾರ್‌ರವರಿಗೆ ಮಾನಸಿಕ ಕಿರುಕುಳ ನೀಡುವುದೇ ಈ ದಾಳಿಯ ಹಿಂದಿನ ಉದ್ದೇಶ‌. ಇ.ಡಿ. ಮತ್ತು ಸಿಬಿಐ ಜಿದ್ದಿಗೆ ಬಿದ್ದಂತೆ ಶಿವಕುಮಾರ್‌ರವರನ್ನು ಟಾರ್ಗೆಟ್ ಮಾಡುತ್ತಿದೆ. ಇ.ಡಿ. ಮತ್ತು ಸಿಬಿಐ ವಿಚಾರಣೆಗೆ ಶಿವಕುಮಾರ್ ಸಹಕರಿಸುತ್ತಿದ್ದಾರೆ. ಹೀಗಿದ್ದರೂ ಪದೇ ಪದೇ ದಾಳಿ ಮಾಡುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News