ಚುನಾವಣೆ ನಡೆಸಲು BBMP ಸಿದ್ಧ: ತುಷಾರ್ ಗಿರಿನಾಥ್

Update: 2022-09-30 14:52 GMT

ಬೆಂಗಳೂರು, ಸೆ.30: ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯು ಸಿದ್ಧಗೊಂಡಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಅವಕಾಶ ನೀಡಲಾಗಿದೆ. ಹಾಗೆಯೇ ಚುನಾವಣಾ ಆಯೋಗವು ಚುನಾವಣೆಯನ್ನು ನಡೆಸಿದರೆ, ಅಗತ್ಯ ಸಹಕಾರ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. 

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವತಿಯಿಂದ ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಅಗತ್ಯ ಮಾಹಿತಿಯನ್ನು ಬಿಬಿಎಂಪಿಯು ಚುನಾವಣೆ ಆಯೋಗಕ್ಕೆ ನೀಡುತ್ತಿದೆ. ಹಾಗೆಯೇ ಅಯೋಗದ ನಿರ್ದೇಶನಗಳನ್ನು ಚಾಚುತಪ್ಪದೆ ಪಾಲನೆ ಮಾಡಲಾಗುತ್ತಿದೆ. ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಪಟ್ಟಿಯಲ್ಲಿ ಯಾರನ್ನು ಕೈ ಬಿಡಲಾಗಿಲ್ಲ. ಆದರೆ, ಪರಿಷ್ಕರಣೆ ಮಾಡುವಾಗ ಆಯೋಗದ ನಿರ್ದೇಶನದಂತೆ ಇಲ್ಲಿಂದ ಬೇರೆಡೆ ಹೋದವರನ್ನು ಕೈ ಬಿಡಲಾಗಿದೆ. ಚುನಾವಣಾ ಆಯೋಗವು ಅವರಿಗೆ ಸ್ಥಳೀಯವಾಗಿ ಸದಸ್ಯತ್ವ ನೀಡಿರುತ್ತದೆ ಎಂದು ಹೇಳಿದರು. 

ವಾರ್ಡ್ ಮೀಸಲಾತಿ ಪಟ್ಟಿಯ ಕುರಿತು ರಾಜ್ಯ ಸರಕಾರವು ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಮೀಸಲಾತಿ ಕುರಿತಂತೆ ಬಿಬಿಎಂಪಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಸರಕಾರವೇ ಹೊಸ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News