×
Ad

ಅ.3ರಿಂದ ಮಂಗಳೂರಿನಲ್ಲಿ ಕ್ಯಾನನ್ ಲಾ ಸೊಸೈಟಿ ಆಫ್ ಇಂಡಿಯಾದ 35 ನೇ ವಾರ್ಷಿಕ ಸಮ್ಮೇಳನ

Update: 2022-10-02 17:08 IST

ಮಂಗಳೂರು: ಕ್ಯಾನನ್ ಲಾ ಸೊಸೈಟಿ ಆಫ್ ಇಂಡಿಯಾ (ಸಿಎಲ್ಎಸ್ಐ) ಇದರ 35ನೇ ವಾರ್ಷಿಕ ಸಮ್ಮೇಳನವು ಮಂಗಳೂರಿನ ಬಜ್ಜೋಡಿಯ ಪಾಸ್ಟೋರಲ್ ಇನ್ ಸ್ಟಿಟ್ಯೂಟ್ ನಲ್ಲಿ ಅ.3 ರಿಂದ 7 ರ ತನಕ ನಡೆಯಲಿದೆ. 

ಕ್ಯಾನನ್ ಲಾ ಸೊಸೈಟಿಯು ಕ್ಯಾಥೊಲಿಕ್ ಕ್ರೈಸ್ತ ಕಾನೂನು ಸಂಬಂಧಿತ ಸಂಸ್ಥೆಯಾಗಿದೆ. ಮಂಗಳೂರಿನಲ್ಲಿ ಇದೇ ಮೊದಲ ಬಾರಿ ನಡೆಯಲಿರುವ ಈ ಸಮ್ಮೇಳನದಲ್ಲಿ ದೇಶಾದ್ಯಂತದ 121 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಉದ್ಘಾಟನಾ ಅಧಿವೇಶನದಲ್ಲಿ ಮಂಗಳೂರಿನ ಬಿಷಪ್ ರೈ|ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಕ್ಯಾಥೊಲಿಕ್ ಕ್ರೈಸ್ತ ಸಭೆಯ ಪಾವಿತ್ರ್ಯತೆಯನ್ನು ಮತ್ತಷ್ಟು ಬಲ ಪಡಿಸುವುದು ಈ ಸಮ್ಮೇಳನದ ಮುಖ್ಯ ವಿಷಯವಾಗಿದೆ. 12 ಆಧ್ಯಯನ ಅಧಿವೇಶನಗಳು ನಡೆಯಲಿದ್ದು, ಕ್ಯಾಥೊಲಿಕ್ ಕ್ರೈಸ್ತ ಕಾನೂನು ತಜ್ಞರು ಮತ್ತು ವಿದ್ವಾಂಸರು ವಿದ್ವತ್ ಪೂರ್ಣ ವಿಚಾರಗಳನ್ನು ಮಂಡಿಸಲಿದ್ದಾರೆ.

ಸಿಎಲ್ಎಸ್ಐ  ಇದರ ಸ್ಥಾಪಕ ಅಧ್ಯಕ್ಷ ಹಾಗೂ ಪೋಷಕ ಮತ್ತು ಭಾರತೀಯ ಕ್ಯಾಥೊಲಿಕ್ ಬಿಷಪರ ಮಂಡಳಿಯ ಅಧ್ಯಕ್ಷ ಮುಂಬಯಿಯ ಆರ್ಚ್ ಬಿಷಪ್ ಹಾಗೂ ಪೋಪ್ ಫ್ರಾನ್ಸಿಸ್ ಅವರ ನಿಕಟವರ್ತಿಯೂ ಆಗಿರುವ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ಅವರು ಕ್ಯಾಥೊಲಿಕ್ ಕ್ರೈಸ್ತ ಸಭೆಯಲ್ಲಿ ಸಿನೋಡಿಲಿಟಿ ಮತ್ತು ಸುಧಾರಣೆಗಳು ಎಂಬ ವಿಷಯದಲ್ಲಿ ಮಾತನಾಡುವರು.  ಮಂಗಳೂರು  ಧರ್ಮ ಪ್ರಾಂತ್ಯದ ಜುಡೀಶಿಯಲ್ ವಿಕಾರ್ ರೆ| ಫಾ| ವಾಲ್ಟರ್  ಡಿ’ಮೆಲ್ಲೊ ನೇತೃತ್ವದ ಸಂಘಟನಾ ಸಮಿತಿ ಸಮ್ಮೇಳನದ ಸಿದ್ಧತೆಗಳನ್ನು ನಡೆಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News