ರಾಜ್ಯಮಟ್ಟದ ಮಹಿಳಾ ದಸರಾ ತ್ರೋಬಾಲ್ : ಮೈಸೂರು ವಿಭಾಗದ ತಂಡಕ್ಕೆ ಪ್ರಥಮ ಸ್ಥಾನ

Update: 2022-10-02 14:32 GMT

ಪುತ್ತೂರು: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ ದಲ್ಲಿ ಮೈಸೂರು ವಿಭಾಗದ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡದಲ್ಲಿ ಪುತ್ತೂರು ತಾಲೂಕಿನ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ಐದು ಮಂದಿ ಹಿರಿಯ ವಿದ್ಯಾರ್ಥಿನಿಯರು ಹಾಗೂ ಮಂಗಳೂರು, ಉಡುಪಿ, ಮಡಿಕೇರಿ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ದಸರಾ ವಿಭಾಗ ಮಟ್ಟದ ಪಂದ್ಯಾಟ ಮಂಡ್ಯದಲ್ಲಿ ನಡೆದಿತ್ತು. ರಾಜ್ಯಮಟ್ಟದ ಪಂದ್ಯಾಟದ ಫೈನಲ್‍ನಲ್ಲಿ ಮೈಸೂರು ವಿಭಾಗವು ಬೆಂಗಳೂರು ನಗರ ತಂಡದ ವಿರುದ್ದ 25-22, 20-25, 25-15 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಆಗಿದೆ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ದೈ.ಶಿ. ಶಿಕ್ಷಕಿ, ಭಾರತ ರಾಷ್ಟ್ರೀಯ ತಂಡದ ತ್ರೋಬಾಲ್ ಆಟಗಾರ್ತಿ ಪೂರ್ಣಿಮಾ ಪಾಪೆಮಜಲು ಮೈಸೂರು ವಿಭಾಗ ತಂಡವನ್ನು ಮುನ್ನಡೆಸಿದ್ದರು.

ತಂಡಕ್ಕೆ ರಾಷ್ಟ್ರೀಯ ತರಬೇತುದಾರ, ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ದೈ.ಶಿ. ಶಿಕ್ಷಕ ಎಂ. ಮೋನಪ್ಪಹಾಗೂ ತಂಡದ ಮೇಲ್ವಿಚಾರಕರಾಗಿ ಸುಜಿತ್ ಸುರತ್ಕಲ್, ವಿನೋದ್ ಮಂಗಳೂರು ಕಾರ್ಯನಿರ್ವಹಿಸಿದ್ದರು. ಸೇಸಪ್ಪ ಆಚಾರ್ ನರಿಮೊಗರು ಹಾಗೂ ಉದ್ಯಮಿ ಶ್ರೀಕಾಂತ್ ಬೆಂಗಳೂರು ತಂಡಕ್ಕೆ ಸಮವಸ್ತ್ರ ಒದಗಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News