ಕಾರ್ಕಳ : ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟನೆ

Update: 2022-10-02 15:27 GMT

ಕಾರ್ಕಳ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸೇವಾ ಪಾಕ್ಷಿಕದಡಿ ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಭಾನುವಾರ ಉದ್ಘಾಟನೆಗೊಂಡಿತು. ಕಾರ್ಕಳ ಬಸ್ ನಿಲ್ದಾಣ ಬಳಿಯ ಪುರಸಭೆ ಕಟ್ಟಡದಲ್ಲಿ ಖಾದಿ ಬಟ್ಟೆ ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಸಚಿವ ಸುನೀಲ್‌ ಕುಮಾರ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದ ಖಾದಿಯನ್ನು ಮತ್ತೊಮ್ಮೆ ಜನಪ್ರಿಯಗೊಳಿಸಿ ಆ ಮೂಲಕ ನೇಕಾರರ ಬದುಕಿಗೆ ಆಸರೆಯಾಗಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ನಾವೆಲ್ಲ ಖಾದಿ ಉಡುಪು ಧರಿಸಿ, ನಮ್ಮ ದೈನಂದಿನ ಬದುಕಿನಲ್ಲಿ ಖಾದಿಗೊಂದು ಕಾಯಂ ಸ್ಥಾನ ನೀಡುವ ಮೂಲಕ ಪ್ರಧಾನಿಯವರ ಆಶಯವನ್ನು ಈಡೇರಿಸಬಹುದು. ದೇಸಿ ಸೊಗಡಿನ ಖಾದಿ ಈಗ ಮೌಲ್ಯ ವರ್ಧಿಸಿಕೊಂಡು ಆಧುನಿಕ ಶೈಲಿಯಲ್ಲೂ ಲಭ್ಯವಿದೆ. ಎಲ್ಲರೂ ಖಾದಿಯನ್ನು ಬಳಸುವುದರಿಂದ ಸಾವಿರಾರು ನೇಕಾರರ ಕುಟುಂಬಗಳಿಗೆ ಆಸರೆಯಾಗಬಹುದಾಗಿದೆ ಎಂದರು. ಕಾರ್ಕಳ ಜನತೆಗೆ ಖಾದಿಯನ್ನು ಉಪಯೋಗಿ ಸಲು ಇದು ಒಂದು ಉತ್ತಮ ಅವಕಾಶವಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಈ ಸಂದರ್ಭ ಸುನೀಲ್‌ ಕುಮಾರ್‌ ಮನವಿ ಮಾಡಿಕೊಂಡಿರು.

ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್‌, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ನಗರಾಧ್ಯಕ್ಷ ರವೀಂದ್ರ ಮೊಯ್ಲಿ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್‌, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್‌ ದೇವಾಡಿಗ, ಕಾರ್ಕಳ ತಾಲೂಕು ಬಿಜೆಪಿ ಕಾರ್ಯದರ್ಶಿ ಅನಂತಕೃಷ್ಣ ಶೆಣೈ, ಬಿಜೆಪಿ ವಕ್ತಾರ ಹರೀಶ್‌ ಶೆಣೈ, ಆನಂದ್ರಾಯ ನಾಯಕ್‌, ಪುರಸಭೆ ಸದಸ್ಯರು ಮತ್ತು ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2022ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿಗೆ ಕಾರ್ಕಳದ ಶಿಲ್ಪಾಗ್ರಾಮದ ಶಿಲ್ಪಿ ಕೆ. ಸತೀಶ್ ಆಚಾರ್ಯ ಆಯ್ಕೆಯಾಗಿದ್ದಾರೆ. ಅ. 10ರಂದು ಸಂಜೆ 5 ಗಂಟೆಗೆ ಮೈಸೂರಿನಲ್ಲಿ ನಡೆಯಲಿರುವ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಹಸ್ತಾಂತರಿಸಲಾಗುವುದು. ಪ್ರಶಸ್ತಿಯು 25 ಸಾವಿರ ರೂ. ನಗದು, ನೆನಪಿನ ಕಾಣಿಕೆ ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ತಿಳಿಸಿದ್ದಾರೆ.  ಒಟ್ಟು 10 ಮಂದಿ ಶಿಲ್ಪಿಗಳು ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ರಾಘವೇಂದ್ರ ಗದಗ, ಶಿವಕುಮಾರ್‌ ಬೆಂಗಳೂರು, ನಾಗರಾಜ ಬಿ. ಕಂಬಾರ ಯಾದಗಿರಿ, ಕೆ. ಸುರೇಶ್ ಆಚಾರ್ಯ ವಿಜಯನಗರ, ವೀರೇಶ್‌ ಜಿ. ಮಾಯಾಚಾರ್ಯ ಬಾಗಲಕೋಟೆ, ನಾಗೇಂದ್ರ ಎಸ್‌. ಕಮಾರ ಧಾರವಾಡ, ಅಶೋಕ ಆ‌. ಬಡಿಗೇರ ಬೆಳಗಾವಿ, ನಿಂಗಪ್ಪಡಿ ಕೇರಿ ಕಲಬುರಗಿ, ಡಿ.ಎನ್. ಚಂದ್ರಶೇಖರ ಶಿವಮೊಗ್ಗ ಪ್ರಶಸ್ತಿಗೆ ಆಯ್ಕೆಯಾದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News