ಮಂಗಳೂರು: ಸಿಟಿ ಗೋಲ್ಡ್‌ನ ʼಕೆವಾ ಬಾಕ್ಸ್ʼ ಅನಾವರಣ

Update: 2022-10-02 16:50 GMT

ಮಂಗಳೂರು, ಅ. 2: ಜುವೆಲ್ಲರಿ ಕ್ಷೇತ್ರದಲ್ಲಿ ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್‌ನ ಅಂಗಸಂಸ್ಥೆ ‘ಕೆವಾ ಬಾಕ್ಸ್’ನ ಅಧಿಕೃತ ಅನಾವರಣ ಕಾರ್ಯಕ್ರಮವು ನಗರದ ನೆಕ್ಸಸ್ ಮಾಲ್ (ಫಿಝಾ ಮಾಲ್)ನಲ್ಲಿ ‘ಸಾಂಸ್ಕೃತಿಕ ವೈಶಿಷ್ಟ್ಯ: ನಮಸ್ತೆ ಇಂಡಿಯಾ’ ಎಂಬ ವಿಶೇಷ ಕಾರ್ಯಕ್ರಮ ದೊಂದಿಗೆ ರವಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿ ಡೈಸಿ ಶಾ, ಖ್ಯಾತ ಸಾಂಸ್ಕೃತಿಕ ತಂಡವಾದ ಹರಿ ಮತ್ತು ಚೇತನಾ ಅವರಿಂದ ವಿಶೇಷ ಕಾರ್ಯಕ್ರಮ ನಡೆಯಿತು.

ಕೆವಾ ಬಾಕ್ಸ್‌ನ ಅಧ್ಯಕ್ಷ ಅಬೂಬಕರ್ ಮಂಗಳೂರಿನ ಮಳಿಗೆಗೆ ಚಾಲನೆ ನೀಡಿ ಮಾತನಾಡುತ್ತಾ, ಕೆವಾ ಬಾಕ್ಸ್  ತನ್ನ ಖ್ಯಾತ ವಿನ್ಯಾಸದ ಆಭರಣಗಳ ಮೂಲಕ ಜಗತ್ತಿನ ವಿವಿಧ ದೇಶಗಳಲ್ಲಿ ಮನ್ನಣೆ ಪಡೆದಿದೆ. ಮಂಗಳೂರಿನಲ್ಲಿಯೂ ಆರು ತಿಂಗಳ ಹಿಂದೆ ಆರಂಭಗೊಂಡು ಯುವ ನಾಯಕತ್ವದೊಂದಿಗೆ ಜನರ ಸಹಕಾರ ದೊಂದಿಗೆ ಮುನ್ನಡೆಯುತ್ತಿದೆ ಎಂದು ಶುಭ ಹಾರೈಸಿದರು.

ವಿಶ್ವದ ಆಭರಣ ಕೇಂದ್ರಗಳಾಗಿ ಗುರುತಿಸಿಕೊಂಡಿರುವ ಭಾರತ, ಇಟಲಿ ಮತ್ತು ಟರ್ಕಿಯ ಹಗುರ ಹಾಗೂ ನವನವೀನ ಕಲಾತ್ಮಕ ವಿನ್ಯಾಸಗಳಿಂದ ರೂಪಿಸಲಾದ ಚಿನ್ನಾಭರಣಗಳ ಅಪಾರ ಸಂಗ್ರಹವನ್ನು ಕೆವಾ ಬಾಕ್ಸ್ ಹೊಂದಿದೆ. ದುಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾದ ಪ್ರೈಡ್ ಗ್ರೂಪ್‌ನ ಸಹಭಾಗಿತ್ವ ಮತ್ತು ಸಿಟಿಗೋಲ್ಡ್, ಡೈಮಂಡ್ಸ್ ಗ್ರೂಪ್‌ನ ಆಶ್ರಯದಲ್ಲಿ ಆರು ತಿಂಗಳ ಹಿಂದೆ ನೆಕ್ಸಸ್ ಮಾಲ್‌ನಲ್ಲಿ ಕೆವಾ ಬಾಕ್ಸ್ ಕಾರ್ಯಾರಂಭಿಸಿದೆ.

ಮುಂದಿನ ವರ್ಷಗಳಲ್ಲಿ ಭಾರತಾದ್ಯಂತ 50 ಮಳಿಗೆಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದ್ದು, ವೇಗವಾಗಿ ಬೆಳೆಯುತ್ತಿರುವ ನೂತನ ಜುವೆಲ್ಲರಿ ಬ್ರಾಂಡ್ ಆಗಿ ಈಗಾಗಲೇ ಕೆವಾ ಬಾಕ್ಸ್ ಅಂತರ್ ರಾಷ್ಟ್ರೀಯ ಐಕಾನಿಕ್ ಪ್ರಶಸ್ತಿಯನ್ನು ಕೂಡಾ ಪಡೆದಿದೆ ಎಂದು ಕೆವಾ ಬಾಕ್ಸ್‌ನ ಸ್ಥಾಪಕ ಸಿಇಒ ಮುಹಮ್ಮದ್ ದಿಲ್ಶಾದ್ ತಿಳಿಸಿದರು ಮತ್ತು ಅವರು ಗಣ್ಯರನ್ನು ಸ್ವಾಗತಿಸಿದರು.

ವೇದಿಕೆಯಲ್ಲಿ ಸಿಟಿ ಗೋಲ್ಡ್ ಅಧ್ಯಕ್ಷ ಕೆ.ಅಬ್ದುಲ್ ಕರೀಂ, ಕೆವಾ ಬಾಕ್ಸ್ ಬಳಗದ ನೌಶಾದ್, ರಫೀಕ್, ಸಾಜಿದ್, ಇರ್ಷಾದ್ ಉಪಸ್ಥಿತರಿದ್ದರು.

ಬಾಲಿವುಡ್ ಸೆಲೆಬ್ರಿಟಿ ಡೈಸಿ ಶಾ, ಕೆಜಿಎಫ್ ಖ್ಯಾತಿಯ ಕನ್ನಡ ಚಲನಚಿತ್ರ ರಂಗದ ಕಲಾವಿದ ತಾರಕ್ ಪೊನ್ನಪ್ಪ, ಕಲಾವಿದರಾದ ಸೋನಿ ಕೌರ್, ಮಾಯಾ ಪ್ರದೀಪ್, ಖ್ಯಾತ ಸಾಂಸ್ಕೃತಿಕ ತಂಡವಾದ ಹರಿ ಮತ್ತು ಚೇತನಾ ಅವರಿಂದ ವಿಶೇಷ ಕಾರ್ಯ ಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News