ಪಿಎ ಇನ್‌ಸ್ಟಿಟ್ಯೂಟ್‌ನಲ್ಲಿ ಫಿಸಿಯೋಥೆರಪಿ ಸೆಂಟರ್ ಉದ್ಘಾಟನೆ‌, ಉಚಿತ ವೈದ್ಯಕೀಯ ಶಿಬಿರ

Update: 2022-10-03 09:42 GMT

ಮಂಗಳೂರು: ದಿ. ಡಾ ಪಿಎ ಇಬ್ರಾಹಿಂ ಹಾಜಿ ಸ್ಮರಣಾರ್ಥ ಪಿಎ ಇನ್‌ಸ್ಟಿಟ್ಯೂಟ್‌ನಲ್ಲಿ  ಡಾ. ಪಿ.ಎ.ಇಬ್ರಾಹಿಂ ಹಾಜಿ ಮೆಮೋರಿಯಲ್  ಫಿಸಿಯೋಥೆರಪಿ ಸೆಂಟರ್ ಉದ್ಘಾಟನೆ ಮತ್ತು ಉಚಿತ ವೈದ್ಯಕೀಯ ಶಿಬಿರ‌ ಶನಿವಾರ ನಡೆಯಿತು.

ಕೆರಳದ ಪೊನ್ನಾನಿ ಕ್ಷೇತ್ರದ ಸಂಸದರಾದ ಇ.ಟಿ. ಮಹಮ್ಮದ್ ಬಶೀರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ವ್ಯಕ್ತಿಗಳಲ್ಲಿ ಫಿಸಿಯೋಥೆರಪಿಯ ಮತ್ತು ಆರೋಗ್ಯದ ಪ್ರಾಮುಖ್ಯತೆ ಮತ್ತು ಶಿಕ್ಷಣ ಸಂಸ್ಥೆಗಳ ಮಹತ್ವದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಮುಖ್ಯ ಭಾಷಣವನ್ನು ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ ಮಾಡಿ,  ಡಾ.ಪಿ.ಎ.ಇಬ್ರಾಹಿಂ ಹಾಜಿ ಮೆಮೋರಿಯಲ್  ಫಿಸಿಯೋಥೆರಪಿ ಸೆಂಟರ್‌ನ ಉದ್ದೇಶಿತ ಕಟ್ಟಡ ಯೋಜನೆಯ ವಿಡಿಯೋವನ್ನು ಬಿಡುಗಡೆ ಮಾಡಿದರು.

ಡಾ. ಯು.ಟಿ.ಇಫ್ತಿಕಾರ್ ಅಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷೀಯ ಭಾಷಣವನ್ನು ಪಿ ಎ ಸಮೂಹ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ ಮಾಡಿದರು.

ಕಾರ್ಯಕ್ರಮದಲ್ಲಿ ಅಬ್ದುಲ್ಲಾ ಇಬ್ರಾಹಿಂ, ಅಬ್ದುಲ್ ಲತೀಫ್‌, ಮೊಹಮ್ಮದ್ ಶಾಫಿ, ಅಮೀನ್ ಇಬ್ರಾಹಿಂ, ಸಲ್ಮಾನ್ ಇಬ್ರಾಹಿಂ, ಝುಬೈರ್ ಇಬ್ರಾಹಿಂ, ಬಿಲಾಲ್ ಇಬ್ರಾಹಿಂ, ಆದಿಲ್ ಇಬ್ರಾಹಿಂ, ಆಯಿಶಾ ಎಲ್  ಪಿ.ಎ.ಅಬೂಬಕರ್, ಪಿಎ ಹಂಝ, ವಿ ಹಾಶಿಮ್‌, ಅಹ್ಮದ್ ಕುಟ್ಟಿ, ಕೆ.ಎಂ.ಹನೀಫ್, ಶರ್ಫುದ್ದಿನ್ ಪಿಕೆ, ಡಾ. ಸಯ್ಯದ್ ಅಮೀನ್, ಅಹ್ಮದ್‌, ಡಾ. ರಮಿಸ್‌, ಡಾ. ಸಲಿಮುಲ್ಲ, ಡಾ. ಸರ್ಫರಾಜ್ ಜೆ ಹಸಿಂ, ಡಾ. ಸೂಫಿ ಉಪಸ್ಥಿತರಿದ್ದರು.

ಪಿ.ಎ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲರಾದ ಡಾ ಸಜೀಶ್ ರಘುನಾಥನ  ಸ್ವಾಗತ ಮಾಡಿದರು. ಸಹಾಯಕ ಪ್ರಾಧ್ಯಾಪಕ ಶಾನಿಜ್ ಟಿಎಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News