ಶ್ರೀಮಂತ ಬೆಂಗಳೂರು ನಗರ ಈಗ ಕಸದ ನಗರವಾಗಿದೆ: ಮೋಹನ್ ದಾಸ್ ಪೈ

Update: 2022-10-03 12:39 GMT

ಬೆಂಗಳೂರು: ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಬೆಂಗಳೂರು 45 ನಗರಗಳ ಪಟ್ಟಿಯಲ್ಲಿ 43ನೇ ಸ್ಥಾನದಲ್ಲಿದ್ದು, ಈ ಕುರಿತು ಉದ್ಯಮಿ ಮೋಹನ್ ದಾಸ್ ಪೈ ಅವರು ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

''ಇದು ಎಂತಹ ಅವಮಾನ! ಭಾರತದ ಏಕೈಕ ಜಾಗತಿಕ ನಗರ, ಶ್ರೀಮಂತ ನಗರವು ಕಸದ ನಗರವಾಗಿದೆ. ನಮಗೆ ನಾಚಿಕೆಯಾಗುತ್ತದೆ!'' ಎಂದು ಟ್ವೀಟ್ ಮಾಡಿದ್ದಾರೆ.   ತಮ್ಮ ಈ  ಟ್ವೀಟ್‌ ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಅಶ್ವತ್ಥ ನಾರಾಯಣ ಅವರಿಗೆ ಟ್ಯಾಗ್ ಮಾಡಿದ್ದಾರೆ.

''ನಮಗೆ ತುರ್ತು ಸುಧಾರಣೆಗಳು, ಕಠಿಣ ಕ್ರಮಗಳ ಅಗತ್ಯವಿದೆ'' ಎಂದು ಆಗ್ರಹಿಸಿರುವ ಅವರು, ಪ್ರಧಾನಿ ಮೋದಿ, ಬಿಎಲ್ ಸಂತೋಷ್, ಫ್ರಧಾನಿ ಕಚೇರಿಗೂ ಟ್ಯಾಗ್ ಮಾಡಿದ್ದಾರೆ. 

''ನಮ್ಮ ಶಾಸಕರು, ಸಂಸದರು ವಿಫಲವಾಗಿದ್ದಾರೆ. ಹೆಚ್ಚಿನ ಶಾಸಕರು ಭ್ರಷ್ಟರು'' ಎಂದು ಇನ್ನೊಂದು ಟ್ವೀಟ್ ನಲ್ಲಿ ಕಿಡಿಕಾರಿರುವ ಅವರು,  ಸಿಎಂ ಬೊಮ್ಮಾಯಿ, CMO ಕರ್ನಾಟಕ, ಡಾ. ಸಿ ಎನ್ ಅಶ್ವತ್ಥ್ ನಾರಾಯಣ, ಬಿಎಲ್ ಸಂತೋಷ್, ಆರ್. ಕೆ. ಮಿಶ್ರ, ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್​ಗೆ ಪೈ ಅವರಿಗೆ ಟ್ಯಾಗ್ ಮಾಡಿದ್ದಾರೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ವಿವಿಧ ಅಂಕಿಅಂಶಗಳನ್ನು ಆಧರಿಸಿ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು (ಬಿಬಿಎಂಪಿ) 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 45 ನಗರಗಳಲ್ಲಿ 43 ನೇ ಸ್ಥಾನದಲ್ಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News